ಎಮರ್ಜನ್ಸಿ ಸಿನಿಮಾ ಶೂಟಿಂಗ್ ಗೆ ಸಂಸತ್ ಭವನ ಕೇಳಿದ್ರಾ ಕಂಗನಾ?: ಈ ಕುರಿತು ನಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜನ್ಸಿ ಸಿನಿಮಾದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಇದರ ನಡುವೆ, ಸಿನಿಮಾ ಶೂಟಿಂಗ್ ಗೆ ಸಂಸತ್ ಭವನವನ್ನು ಕೇಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಕಂಗನಾ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ಸುದ್ದಿಗೆ ಕಂಗನಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲ ಬಾರಿಗೆ ಸಂಸತ್ತಿನಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಲು ಅನುಮತಿ ಕೇಳಲಾಗಿದೆ. ‘ಎಮರ್ಜೆನ್ಸಿ’ ಸಿನಿಮಾದ ಒಂದು ಸಣ್ಣ ಭಾಗವನ್ನು ಸಂಸತ್ತಿ ಭವನದಲ್ಲಿ ಚಿತ್ರೀಕರಣಗೊಳ್ಳಲಿದೆ’ ಎನ್ನುವ ಸುದ್ದಿಯನ್ನು ಶೇರ್ ಮಾಡಿ. ‘ಇದು ನಿಜವಲ್ಲ, ಇದು ಫೇಕ್ ಸುದ್ದಿ’ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಕುರಿತು ತಾವು ನಿರ್ಮಿಸುತ್ತಿರುವ ಸಿನಿಮಾಕ್ಕೆ ಸಂಸತ್‌ ಭವನದೊಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಕಂಗನಾ ರಾಣಾವತ್‌ ಲೋಕಸಭೆ ಸಚಿವಾಲಯವನ್ನು ಕೋರಿದ್ದಾರೆ ಎನ್ನಲಾಗುತ್ತಿದೆ. ವಾಸ್ತವವಾಗಿ ಸಂಸತ್‌ ಭವನದೊಳಗೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಹಾಗೂ ಸಂಸದ್‌ ಟೀವಿ ಚಾನಲ್‌ನವರಿಗೆ ಮಾತ್ರ ವಿಡಿಯೋ ಚಿತ್ರೀಕರಣಕ್ಕೆ ಅನುಮತಿಯಿದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚಿತ್ರೀಕರಣಕ್ಕೆ ಅನುಮತಿಯಿಲ್ಲ.ಹೀಗಾಗಿ ಕಂಗನಾ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದೀಗ ಈ ಬಗ್ಗೆ ಸ್ವತಃ ಕಂಗನಾ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದ್ದಾರೆ.

‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ಅವರೇ ಬರೆದು, ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!