ಶಬರಿಮಲೆ ಯಾತ್ರೆಯಲ್ಲಿ ಹೃದಯಾಘಾತದಿಂದ 23 ಮಂದಿ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಈ ಬಾರಿಯ ಶಬರಿಮಲೆ ಯಾತ್ರೆಯ 35 ದಿನಗಳಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 23 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಸುತ್ತ ಶಬರಿಮಲೆ ತೆರಳುವವರು ಸಂಖ್ಯೆ ಅಧಿಕವಾಗಿದ್ದು, ಈ ನಡುವೆ ಅನಾರೋಗ್ಯದಿಂದಾಗಿ ಭಕ್ತರು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

ನೀಲಿಮಲ ಮತ್ತು ಅಪ್ಪಾಚ್ಚಿಮೇಡುಗಳಲ್ಲಿ ಬೆಟ್ಟ ಹತ್ತಬೇಕಾದರೆ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದುವರೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ 106 ಮಂದಿಯನ್ನು ಪಂಪಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಪಂಪಾ ಮತ್ತು ಸನ್ನಿಧಾನಂ ನಡುವಿನ ಕಾರ್ಡಿಯೋ ಕೇಂದ್ರಗಳಲ್ಲಿ ಕೇವಲ ಆಮ್ಲಜನಕ ಸಿಲಿಂಡರ್‌ಗಳು ಮಾತ್ರ ಇವೆ. ಸೂಕ್ತ ತುರ್ತು ಚಿಕಿತ್ಸೆ ಕೊಡಿಸಲು ಪಂಪಾದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಭಕ್ತರ ದಟ್ಟಣೆಯ ಸಮಯದಲ್ಲಿ ಅಂಬುಲೆನ್ಸ್‌ ಈ ಹಾದಿಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ವಾರಗಳ ಹಿಂದೆ, ಇದೇ ರೀತಿ ಅಂಬುಲೆನ್ಸ್‌ ಬರುವಾಗ ನಡೆದ ಕಾಲ್ತುಳಿತದಲ್ಲಿ ಅನೇಕ ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!