ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಅಂಗಳಕ್ಕೆ ವಿದ್ಯಾರ್ಥಿಗಳ ದಂಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’ ಮೇಳೈಸುತ್ತಿದೆ.
ಜಾಂಬೂರಿ ಜಾತ್ರೆಯನ್ನು ವೀಕ್ಷಿಸಲು ಪುಟಾಣಿ ಮಕ್ಕಳಿಂದ ತೊಡಗಿ ಪ್ರೌಢಶಾಲಾ ವಿದ್ಯಾರ್ಥಿಗಳ ತನಕವೂ ಶಾಲೆಗಳಿಂದ ಪ್ರವಾಸ ಬಂದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಬೆಳಗ್ಗೆ ೮ ಗಂಟೆಗೇ ವಿದ್ಯಾಗಿರಿಯ ಆವರಣಕ್ಕೆ ಆಗಮಿಸಿ ಪ್ರತಿಯೊಂದನ್ನೂ ವೀಕ್ಷಿಸಿ, ಜಾಂಬೂರಿಯ ಅದ್ಭುತಗಳನ್ನು ಕಣ್ ತುಂಬಿಕೊಳ್ಳುವ ದೃಶ್ಯ ಕಂಡು ಬಂದಿದೆ. ಜಾಂಬೂರಿಗೆ ಪ್ರತಿದಿನವೂ ಹಲವು ಸಂಸ್ಥೆಗಳ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಗಷ್ಟೇ ಈ ಮಾಹಿತಿಗಳು ಲಭ್ಯವಾದರೆ ಸಾಲದು. ಪ್ರತಿ ಯೊಬ್ಬ ವಿದ್ಯಾರ್ಥಿಗಳಿಗೂ, ಅವರ ಹೆತ್ತವರಿಗೂ ಈ ಶಿಕ್ಷಣ ಲಭ್ಯವಾಗಬೇಕೆಂಬ ಮಹದೋದ್ದೇಶ
ದಿಂದ ವಿದ್ಯಾಸಂಸ್ಥೆಗಳಿಗೆ ಜಾಂಬೂರಿಯ ಸಂಘಟನಾ ಸಮಿತಿ ಮನವಿ ಮಾಡಿದ್ದು, ಅದನ್ನು ಮನ್ನಿಸಿ ಶಾಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!