IPL 2023 Auction | RCB ಗೆ ಸೇರುತ್ತಲೇ ತಂಡವನ್ನು ಟ್ರೋಲ್‌ ಮಾಡಿದ ವಿಲ್‌ ಜಾಕ್ಸ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶುಕ್ರವಾರ ಸಾಗಿದ ಐಪಿಎಲ್ 2023ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿದೆ. ಪ್ರಾಂಚೈಸಿ 3.2 ಕೋಟಿಗೆ ಖರೀದಿಸಿದ ಬಳಿಕ ಜ್ಯಾಕ್ಸ್ ತನ್ನದೇ ಫ್ರಾಂಚೈಸಿಯನ್ನು ಟ್ರೋಲ್ ಮಾಡುವ ಮೂಲಕ ನೇಟಿಜನ್‌ ಗಳನ್ನು ದಂಗುಬಡಿಸಿದ್ದಾರೆ!.
ಗಾಯಳು ಗ್ಲೇನ್‌ ಮ್ಯಾಕ್ಸ್‌ ವೆಲ್‌ ಈ ಸೀಸನ್‌ ನಲ್ಲಿ ಆಡುವ ಖಚಿತತೆ ಇಲ್ಲದ ಕಾರಣ ಆರ್ಸಿಬಿ ದೊಡ್ಡ ಮೊತ್ತ ಕೊಟ್ಟು ಇಂಗ್ಲಿಷ್‌ ಆಟಗಾರನನ್ನು ಖರೀದಿಸಿದೆ. ಬಿಗ್‌ ಹಿಟ್ಟಿಂಗ್‌ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಜ್ಯಾಕ್ಸ್‌ ಮ್ಯಾಕ್ಸ್‌ ವೆಲ್ ರಂತೆಯೇ ಆಡಬಲ್ಲ ಆಟಗಾರ. ಜೊತೆಗೆ ಆಫ್‌ ಸ್ಪಿನ್ ಸಹ ಮಾಡಬಲ್ಲರು. ಈ ಹಿಂದೆ ಇಂಗ್ಲೆಂಡ್ ಅಂಡರ್‌ 19‌ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್‌ ಉಪನಾಯಕನಾಗಿದ್ದ ಜಾಕ್ಸ್ ಸರ್ರೆಗಾಗಿ ಸಾಕಷ್ಟು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಟಿ 10 ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್‌ ಜಗತ್ತು ಹುಬ್ಬೇರಿಸುವಂತೆ ಮಾಡಿದ್ದ.
ಬೆಂಗಳೂರು ಫ್ರಾಂಚೈಸಿ ತಾನು ಖರೀದಿಸಿದ ಆಟಗಾರರನ್ನು ಪರಿಚಯಿಸಲು ಟೆಂಪ್ಲೇಟ್ ಅನ್ನು ಬಳಸುತ್ತಿದ್ದು, ಫ್ರೋಜನ್ ಚೇಂಬರ್‌ನೊಳಗೆ ಅವರನ್ನು ತೋರಿಸುತ್ತಿದೆ. ಆರ್ಸಿಬಿ ಟ್ವಿಟ್‌ ಅನ್ನು ಹಂಚಿಕೊಂಡಿರುವ ವಿಲ್ ಜ್ಯಾಕ್ಸ್, “ಅವಕಾಶಕ್ಕಾಗಿ ಆರ್ಸಿಬಿಗೆ ಕೃತಜ್ಞನಾಗಿದ್ದೇನೆ. ತಂಡಕ್ಕಾಗಿ ಆಡಲು ಅತ್ಯಂತ ಉತ್ಸುಕನಾಗಿದ್ದೇನೆ! ಆದರೆ ಆ ಫೋಟೋದಲ್ಲಿರುವುದು ನಾನೇ ಎಂಬುದರ ಬಗ್ಗೆ ಮಾತ್ರ‌ ನಂಗೆ ಖಚಿತತೆ ಇಲ್ಲ” ಎಂದು ನಗುವ ಎಮೋಜಿ ಜೊತೆಗೆ ಬರೆದುಕೊಂಡಿದ್ದಾರೆ.

ಈ ಮೂಲಕ ಜಾಕ್ಸ್‌ ತಂಡ ಸೇರುತ್ತಲೇ ತಂಡದ ಕಾಲೆಳೆದಿದ್ದಾರೆ. ವಿಲ್ ಜ್ಯಾಕ್ಸ್ ಇಂಗ್ಲೆಂಡ್‌ ತಂಡದ ಪರ ಪಾದಾರ್ಪಣೆ ಮಾಡಿದ್ದು, ಎರಡು ಟಿ 20 ಪಂದ್ಯಗಳನ್ನಾಡಿ 40 ರನ್‌ ಸಿಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!