ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಮಗಳಿಗಾಗಿ ಒಬ್ಬರನ್ನು ಕೊಲೆ ಮಾಡಿ, ಅವರ ಮಗುವನ್ನು ದಂಪತಿ ಅಪಹರಿಸಿದ್ದಾರೆ. ಗುವಾಹಟಿಯ ಶಿವಸಾಗರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪುನಾಲಿ ಹಾಗೂ ಬಸಂತ್ ಮಹಿಳೆ ನಿಟುಮೋನಿಯನ್ನು ಕೊಲೆ ಮಾಡಿ ಆಕೆಯ ಮಗುವನ್ನು ಅಪಹರಿಸಿದ್ದಾರೆ.
ಕೊಲೆ ಮಾಡಿದ ದಂಪತಿ ಮಗಳಿಗೆ ಮಕ್ಕಳಾಗಿರಲಿಲ್ಲ. ಆಕೆಯ ಕೊರಗು ನಿವಾರಿಸಲು ಇನ್ನೊಬ್ಬರ ಮಗು ಕದ್ದು ತರುವ ನಿರ್ಣಯಕ್ಕೆ ದಂಪತಿ ಬಂದಿದ್ದಾರೆ. ನಿಟುಮೊನಿಯನ್ನು ಕೆಲಸದ ನೆಪದಲ್ಲಿ ಮನೆಗೆ ಕರೆಸಿ ಕುತ್ತಿಗೆ ಹಿಸುಕಿ ಕೊಂದು ಚರಂಡಿಯಲ್ಲಿ ಎಸೆದಿದ್ದಾರೆ. ಮಗುವನ್ನು ಅಪಹರಿಸಿ ತಮ್ಮ ಮಗಳಿಗೆ ಕೊಟ್ಟು ದೂರ ಎಲ್ಲಾದರೂ ಹೋಗುವಂತೆ ತಿಳಿಸಿದ್ದಾರೆ.
ಮಗುವನ್ನು ಕಿತ್ತುಕೊಳ್ಳಲು ದಂಪತಿ ಮುಂದಾಗಿದ್ದು, ನಿಟುಮೊನಿ ವಿರೋಧಿಸಿದ್ದಾಳೆ. ಆಗ ಆಕೆಯನ್ನು ಕೊಲೆ ಮಾಡಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.