ಹೊಸದಿಗಂತ ಡಿಜಿಟಲ್ ಡೆಸ್ಕ್:
18ವರ್ಷ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಕೇರಳದ ಮಹಾತ್ಮ ಗಾಂಧಿ ವಿವಿ (ಎಂಜಿಯು) 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದೆ. ಪ್ರೊ ವೈಸ್ ಚಾನ್ಸಲರ್ ಸಿ.ಟಿ.ಅರವಿಂದ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿನಿಯರ ಅಧ್ಯಯನದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಜೆಯನ್ನು ಹೆರಿಗೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದು. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮತ್ತು ಕೋರ್ಸ್ ಅವಧಿಯಲ್ಲಿ ಒಮ್ಮೆ ಮಾತ್ರ ರಜೆ ನೀಡಲಾಗುತ್ತದೆ. ಗರ್ಭಪಾತ, ಟ್ಯೂಬೆಕ್ಟಮಿ ಇತ್ಯಾದಿ ಪ್ರಕರಣಗಳಲ್ಲಿ 14 ದಿನಗಳ ರಜೆ ನೀಡಲಾಗುವುದು ಎಂದು ವಿವಿ ತಿಳಿಸಿದೆ.