Friday, February 3, 2023

Latest Posts

ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಖಾನ್ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಸಹನಟ ಮತ್ತು ಬಾಯ್‌ ಫ್ರೆಂಡ್‌ ಎದು ಹೇಳಲಾಗುವ ಶೀಜಾನ್ ಖಾನ್ ನನ್ನು ಬಂಧಿಸಿದ್ದಾರೆ.
ತುನಿಶಾ ಶರ್ಮಾ ತಾಯಿ ಸಲ್ಲಿಸಿದ ದೂರಿನನ್ವಯ ಪೊಲೀಸರು ಖಾನ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಶೀಜಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವಾಲೀವ್ ಪೊಲೀಸರು ತಿಳಿಸಿದ್ದಾರೆ.
‌20 ವರ್ಷದ ನಟಿ ತುನಿಶಾ ಶರ್ಮಾ ಶನಿವಾರ ಟಿವಿ ಸೀರಿಯಲ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸೆಟ್‌ ನ ಶೌಚಾಲಯಕ್ಕೆ ಹೋದಗಿದ್ದ ಆಕೆ ತುಂಬಾ ಹೊತ್ತಾದರೂ ಹಿಂತಿರುಗದಿದ್ದಾಗ, ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ತುನೀಶಾ ಶರ್ಮಾ ಅವರು ‘ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ‘ಇಷ್ಕ್ ಸುಭಾನ್ ಅಲ್ಲಾ’, ‘ಗಬ್ಬರ್ ಪೂಂಚ್‌ವಾಲಾ’, ‘ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್’ ಮತ್ತು ‘ಚಕ್ರವರ್ತಿ ಅಶೋಕ ಸಾಮ್ರಾಟ್’ ನಂತಹ ಶೋಗಳಲ್ಲಿ ನಟಿಸಿದ್ದಾರೆ.
ಅವರು ‘ಫಿತೂರ್’, ‘ಬಾರ್ ಬಾರ್ ದೇಖೋ’, ‘ಕಹಾನಿ 2: ದುರ್ಗಾ ರಾಣಿ ಸಿಂಗ್’ ಮತ್ತು ‘ದಬಾಂಗ್ 3’ ಸೇರಿದಂತೆ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೀಜಾನ್ ಮೊಹಮ್ಮದ್ ಖಾನ್ ಒಬ್ಬ ಟಿವಿ ನಟನಾಗಿದ್ದು, ಜೋಧಾ ಅಕ್ಬರ್‌ನಲ್ಲಿ ಸುಲ್ತಾನ್ ಮುರಾದ್ ಮಿರ್ಜಾ ಪಾತ್ರ ನಿರ್ವಹಿಸಿದ್ದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!