Thursday, December 4, 2025

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ- ವಿದ್ಯಾರ್ಥಿಗಳ ಘರ್ಷಣೆ, ಕಲ್ಲು ತೂರಾಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ- ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿ, ಕಲ್ಲು ತೂರಾಟ ನಡೆದಿದ್ದು ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಹಲವು ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ಕಲ್ಲು ತೂರಾಟ ಸಹ ನಡೆದಿದೆ.

ಲಂಕಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜ್ ಕುಮಾರ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಹೆಚ್ ಯು ಪ್ರಾಕ್ಟೋರಿಯಲ್ ಬೋರ್ಡ್ ಅಂಕಿತ್ ಪಾಲ್ ಹಾಗೂ ಅಂಕಿತ್ ಸಿಂಗ್ ಎಂಬ ಇಬ್ಬರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದು ದೂರು ನೀಡಿದೆ.

ಇದಕ್ಕೂ ಮುನ್ನ ರಾಜಾರಾಮ್ ಹಾಸ್ಟೆಲ್ ಬಳಿ ಬಿರ್ಲಾ ಸಿ ಹಾಸ್ಟೆಲ್ ನ ವಿದ್ಯಾರ್ಥಿಗೆ ಮಧ್ಯರಾತ್ರಿ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಲು ಹೋಗಿದ್ದಾಗ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ಉಂಟಾಗಿ ಅದು ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಲ್ಲು ತೂರಾಟದವರೆಗೆ ಹೋಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಹಾಸ್ಟೆಲ್ ಮಾರ್ಗವನ್ನು ಸಂಪೂರ್ಣ ಸೀಲ್ ಮಾಡಿದ್ದಾರೆ.

error: Content is protected !!