ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಡಿಯೋಕಾನ್ ಗ್ರೂಪ್ ಕಂಪನಿ ಮತ್ತು ಐಸಿಐಸಿಐ ಬ್ಯಾಂಕ್ ನಡುವಿನ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ರನ್ನು ಕೇಂದ್ರ ತನಿಖಾ ದಳ( ಸಿಬಿಐ) ಬಂಧಿಸಿದೆ.
ಈ ಹಿಂದೆ ಐಸಿಐಸಿಐ ಬ್ಯಾಂಕ್ನ ಮಾಜಿ ಎಂಡಿ ಚಂದಾ ಕೊಚ್ಚಾರ್ ಮತ್ತು ದೀಪಕ್ ಕೊಚ್ಚಾರ್ ದಂಪತಿಯನ್ನು ಮೂರು ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾದ ಧೂತ್ರನ್ನು ಕೆಲ ದಿನಗಳ ವರೆಗೆ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ. ಧೂತ್ ಅವರಿಗೆ ಅನಧಿಕೃತವಾಗಿ ಸಾಲ ನೀಡಿರುವ ಆರೋಪ ಚಂದಾ ಕೊಚ್ಚಾರ್ ಮೇಲಿದೆ. ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ಸಹಾತ ಮಾಡಿರುವ ಆರೋಪದಲ್ಲಿ ತನಿಖೆ ನಡೆಯುತ್ತಿದೆ.