ಬರ್ತ್​ಡೇ ಪಾರ್ಟಿ ಗೆ ಬಂದ ಮಾಜಿ ಪ್ರಿಯತಮೆಗೆ ಮುತ್ತಿಟ್ಟ ಸಲ್ಮಾನ್ ಖಾನ್​​!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಬಾಲಿವುಡ್​ ಸ್ಟಾರ್​ ನಟ ಸಲ್ಮಾನ್ ಖಾನ್​ ಸೋಮವಾರ (ಡಿಸೆಂಬರ್​ 27) ತಮ್ಮ 57ನೇ ಜನುಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಈ ವೇಳೆ ಅವರು ಮುಂಬಯಿಯಲ್ಲಿ ದೊಡ್ಡ ಪಾರ್ಟಿ ಆಯೋಜಿಸಿದ್ದು, ಶಾರುಖ್​ ಖಾನ್​, ನಟಿ ಪೂಜಾ ಹೆಗ್ಡೆ ಸೇರಿದಂತೆ ಸೆಲೆಬ್ರಿಟಿಗಳ ದಂಡು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂಭ್ರಮಕ್ಕೆ ಸಲ್ಮಾನ್​ ಅವರ ಮಾಜಿ ಪ್ರಿಯತಮೆ ಸಂಗೀತಾ ಬಿಜಲಾನಿ ಕೂಡ ಭಾಗವಹಿಸಿದ್ದು, ಸಲ್ಲು ಭಾಯ್ ಹಣೆಗೆ ಮುತ್ತಿಟ್ಟು ಸ್ವಾಗತಿಸಿದ್ದಾರೆ​.

ಸಲ್ಮಾನ್​ ಖಾನ್​ ಮತ್ತು ಸಂಗೀತ ಬಿಜಲಾನಿ 90ರ ದಶಕದಲ್ಲಿ 10 ವರ್ಷಕ್ಕೂ ಅಧಿಕ ಕಾಲ ಡೇಟಿಂಗ್​ನಲ್ಲಿ ಇದ್ದರು. ಬಳಿಕ ಅವರು ಬೇರ್ಪಟ್ಟಿದ್ದರು. ಕ್ರಿಕೆಟರ್ ಹಾಗೂ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಸಂಗೀತಾ ಮದುವೆಯಾಗಿದ್ದರು. 2010ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ.

ಸಲ್ಮಾನ್​ ಹಾಗೂ ಸಂಗೀತಾ ತಮ್ಮ ಪ್ರೀತಿ ಮುರಿದು ಹೋದ ಬಳಿಕವೂ ಸ್ನೇಹ ಮುಂದುವರಿಸಿದ್ದರು. ಹೀಗಾಗಿ 57ನೇ ವರ್ಷದ ಬರ್ತ್​ಡೇ ಸಂಭ್ರಮಕ್ಕೆ ಅವರು ಆಗಮಿಸಿ ಸಲ್ಮಾನ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರಿಬ್ಬರು ಜತೆಯಾಗಿ ನಿಂತು ಮಾತನಾಡುವ ಹಾಗೂ ಮುತ್ತಿಡುವ ಚಿತ್ರಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿವೆ. ಸಲ್ಲು ಅಭಿಮಾನಿಗಳಿಗಂತೂ ಖುಷಿಪಟ್ಟಿದ್ದಾರೆ.

ಇನ್ನು ಸಲ್ಮಾನ್​ ಬರ್ತ್​ ಪಾರ್ಟಿಯಲ್ಲಿ ಪೂಜಾ ಹೆಗ್ಡೆ, ಯುಲಿಯಾ ವಂತೂರ್, ತಬು, ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್, ಕಾರ್ತಿಕ್ ಆರ್ಯನ್, ಸಿದ್ಧಾಂತ್ ಚತುರ್ವೇದಿ, ಸೋನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ ಮತ್ತು ಜಹೀರ್ ಇಕ್ಬಾಲ್ ಮತ್ತಿತರು ಪಾಲ್ಗೊಂಡಿದ್ದರು. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಅವರ ಪತಿ ಆಯುಶ್ ಶರ್ಮಾ, ಸಹೋದರ ಅರ್ಬಾಜ್ ಮತ್ತು ಸೊಹೈಲ್ ಮತ್ತು ಸೋದರಳಿಯ ಅರ್ಹಾನ್ ಖಾನ್ ಅವರೂ ಜತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!