ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ರಾಕೇಶ್ ಅಡಿಗ ಹಾಗೂ ದೀಪಿಕಾ ದಾಸ್ ಫಿನಾಲೆ ರೇಸ್ನಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಬಿಗ್ಬಾಸ್ ಅವರ ಆಸೆಗಳನ್ನು ಪೂರೈಸೋದಕ್ಕೆ ವಿಶೇಷ ಟಾಸ್ಕ್ ಒಂದನ್ನು ನೀಡಿದ್ದರು. ಇದರಲ್ಲಿ ಎಲ್ಲರೂ ತಮ್ಮಿಷ್ಟದ ಬೇಡಿಕೆಗಳನ್ನು ಕೇಳಿಕೊಂಡಿದ್ದರು.
ದಿವ್ಯಾ ತಮ್ಮ ಫಿಯಾನ್ಸೆ ಅರವಿಂದ್ ಮನೆಯೊಳಗೆ ಬರಬೇಕು ಅನ್ನೋದು ನನ್ನ ಆಸೆ ಎಂದು ಕೇಳಿಕೊಂಡಿದ್ದರು. ರೂಪೇಶ್ ಶೆಟ್ಟಿ ಹುಲಿ ಕುಣಿತದ ಗ್ಯಾಂಗ್ ಮನೆಗೆ ಬರಲಿ ಎಂದು ಕೇಳಿದ್ದರು. ಬಿಗ್ಬಾಸ್ ಈ ಎರಡೂ ಆಸೆಯನ್ನು ಈಡೇರಿಸಿದ್ದಾರೆ.
ಹುಲಿ ಕುಣಿತವನ್ನು ಎಂಜಾಯ್ ಮಾಡಿ ಬಂದು ಕಂಟೆಸ್ಟೆಂಟ್ಸ್ ಕುಳಿತಿದ್ದಾಗ, ಕನ್ಫೆಶನ್ ರೂಮ್ನಿಂದ ಅರವಿಂದ್ ಬಂದಿದ್ದಾರೆ. ಮಾತೇ ಬರ್ತಿಲ್ಲ ಎಂದು ದಿವ್ಯಾ ನಾಚಿ ನೀರಾಗಿ ಅರವಿಂದ್ ಅವರನ್ನು ತಬ್ಬಿಕೊಂಡಿದ್ದಾರೆ. ಪ್ರೊಮೊ ನೋಡಿದ ಬಿಗ್ಬಾಸ್ ಫ್ಯಾನ್ಸ್ ಖುಷಿಯಾಗಿದ್ದು, ಎಪಿಸೋಡ್ಗಾಗಿ ಕಾತರರಾಗಿದ್ದಾರೆ.