ಧೋನಿ ಮಗಳಿಗೆ ಆಟೋಗ್ರಾಫ್‌ ಮಾಡಿದ ಜರ್ಸಿ ಗಿಫ್ಟ್‌ ಕೊಟ್ಟ ಫುಟ್ಬಾಲ್‌ ಲೆಜೆಂಡ್ ಮೆಸ್ಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೆಜೆಂಡರಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ…ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಮಗಳಿಗೆ ಉಡುಗೊರೆ ನೀಡಿದ್ದಾರೆ. ಧೋನಿ ಪುತ್ರಿ ಝಿವಾ ಅವರು ಸ್ವತಃ ಮೆಸ್ಸಿ ಅವರ ಹಸ್ತಾಕ್ಷರವಿರುವ ಅರ್ಜೆಂಟೀನಾ ಜೆರ್ಸಿಯನ್ನು ಉಡುಗೊರೆಯಾಗಿ ಪಡೆದರು. ಝಿವಾ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಧೋನಿ ಇದನ್ನು ಬಹಿರಂಗಪಡಿಸಿದ್ದಾರೆ.

ಝಿವಾ ಜರ್ಸಿಯನ್ನು ಧರಿಸಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಮೆಸ್ಸಿ ಈ ಜೆರ್ಸಿಯ ಮೇಲೆ ‘ಪ್ಯಾರಾ ಝಿವಾ’ ಎಂದೂ ಬರೆದಿದ್ದಾರೆ. ಧೋನಿಗೂ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಧೋನಿ ಬಿಡುವಿನ ವೇಳೆಯಲ್ಲಿ ಫುಟ್ಬಾಲ್ ಆಡಲು ಇಷ್ಟಪಡುತ್ತಾರೆ.

ತನ್ನ ತಂದೆಯಿಂದ ಝಿವಾ ಕೂಡಾ ಫುಟ್‌ಬಾಲ್‌ ಬಗ್ಗೆ ಒಲವು ಬೆಳೆಸಿಕೊಂಡರು. ಇತ್ತೀಚಿಗೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದ ನಂತರ ಲಿಯೋನೆಲ್ ಮೆಸ್ಸಿ ಅವರ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅರ್ಜೆಂಟೀನಾದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಮೆಸ್ಸಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!