ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಕಂಪನಿಯಾದ ಸರ್ಕಾರಿ ಸ್ವಾಮ್ಯದ NTPC, ಭಾರತದಲ್ಲಿ ಹಸಿರು ಮೆಥನಾಲ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಟೆಕ್ನಿಮಾಂಟ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಟೆಕ್ನಿಮಾಂಟ್ ಪ್ರೈವೇಟ್ ಲಿಮಿಟೆಡ್ ಇಟಲಿ ಮೂಲದ ಮೈರ್ ಟೆಕ್ನಿಮಾಂಟ್ ಗ್ರೂಪ್‌ನ ಭಾರತೀಯ ಅಂಗಸಂಸ್ಥೆಯಾಗಿದೆ.
“NTPC ಯ ಈ ಯೋಜನೆಯಲ್ಲಿ ಭಾರತದಲ್ಲಿ ವಾಣಿಜ್ಯ ಹಸಿರು ಮೆಥನಾಲ್ ಉತ್ಪಾದನಾ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಜಂಟಿಯಾಗಿ ಮೌಲ್ಯಮಾಪನ ಮಾಡುವುದು ಮತ್ತು ಅನ್ವೇಷಿಸುವುದು MOU ನ ಉದ್ದೇಶವಾಗಿದೆ” ಎಂದು ಕಂಪನಿಯು ತಿಳಿಸಿದೆ. ಹಸಿರು ಮೆಥನಾಲ್ ಯೋಜನೆಯು NTPC ವಿದ್ಯುತ್ ಸ್ಥಾವರಗಳಿಂದ ಇಂಗಾಲವನ್ನು ಸೆರೆಹಿಡಿಯುವುದು ಮತ್ತು ಅದನ್ನು ಹಸಿರು ಇಂಧನವಾಗಿ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ.
ಹಸಿರು ಮೆಥನಾಲ್ ವ್ಯಾಪಕ ಶ್ರೇಣಿಯ ಅನ್ವಯಿಕೆಗಳನ್ನು ಹೊಂದಿದೆ, ರಾಸಾಯನಿಕ ಉದ್ಯಮಕ್ಕೆ ಮೂಲ ವಸ್ತುವಾಗಿ ಸೇವೆ ಸಲ್ಲಿಸುವುದು, ನವೀಕರಿಸಬಹುದಾದ ವಿದ್ಯುತ್ ಅನ್ನು ಸಂಗ್ರಹಿಸುವುದು ಮತ್ತು ಸಾರಿಗೆ ಇಂಧನವಾಗಿಯೂ ಸಹ ಹಸಿರುವ ಮೆಥನಾಲ್ ಬಳಕೆಯಾಗುತ್ತದೆ. ಕಡಲ ಇಂಧನಗಳಿಗೆ ಬದಲಿ ಇಂಧನವಾಗಿಯೂ ಇದನ್ನು ಪರಿಗಣಿಸಲಾಗಿದೆ.