ಲಾಥಮ್‌ ಶತಕ, ಕಾನ್ವೆ, ವಿಲಿಯಮ್‌ ಸನ್‌ ಅರ್ಧಶತಕ: ಪಾಕ್‌ ಗೆ ಭರ್ಜರಿ ತಿರುಗೇಟು ನೀಡಿದ ನ್ಯೂಜಿಲೆಂಡ್


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಪಾಕ್‌ ಗೆ ಪ್ರವಾಸಿ ನ್ಯೂಜೆಲೆಂಡ್‌ ಭರ್ಜರಿ ತಿರುಗೇಟು ನೀಡಿದೆ.
ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ 438 ರನ್‌ ಕಲೆಹಾಕಿತು. ನಾಯಕ ಬಾಬರ್‌ ಅಜಂ(161), ಕೆಳಕ್ರಮಾಂಕದಲ್ಲಿ ಆಘಾ ಸಲ್ಮಾನ್‌ (103) ಭರ್ಚಜರಿ ಶತಕ ಸಿಡಿಸಿ ಪಾಕ್‌ ತಂಡ ಬೃಹತ್‌ ಮೊತ್ತ ದಾಖಲಿಸಲು ನೆರವಾದರು.
ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ಗೆ ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ಟಾಮ್ ಲ್ಯಾಥಮ್ 83 ರನ್‌ ಗಳ ಭರ್ಜರಿ ಓಪನಿಂಗ್‌ ಒದಗಿಸಿದರು. ಕಾನ್ವೆ 93 ರನ್‌ ಸಿಡಿಸಿ ಶತಕ ವಂಚಿತರಾದರೆ, ಟಾಮ್‌ ಲಾಥಮ್ 113 ರನ್ ಸಿಡಿಸಿ ಸಂಭ್ರಮಿಸಿದರು. ಬಳಿಕ ಬಂದ ಕೇನ್‌ ವಿಲಿಯಮ್‌ ಸನ್‌ 52 ರನ್‌ ಗಳಿಸಿ ತಂಡದ ಹೋರಾಟ ಮುಂದುವರೆಸಿದ್ದಾರೆ. ನ್ಯೂಜಿಲೆಂಡ್‌ 4 ವಿಕೆಟ್‌ ಗೆ 333 ರನ್‌ ಕಲೆಹಾಕಿದ್ದು, ಪಾಕ್‌ ಮೊದಲ ಇನ್ನಿಂಗ್ಸ್‌ ಬಾಕಿ ಚುಕ್ತ ಮಾಡಲು 105 ರನ್‌ ಗಳಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!