Friday, December 5, 2025

HEALTH | ಇದೇ ನೋಡಿ ಲಿವರ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣ: ನಿಮ್ಮಲ್ಲೂ ಕಂಡುಬಂದ್ರೆ ನಿರ್ಲಕ್ಷಿಸಬೇಡಿ!

ದೇಹದಲ್ಲಿ ಏನಾದರೂ ಅಸಮಾನ್ಯ ಬದಲಾವಣೆಗಳು ಕಾಣಿಸಿದಾಗ ನಾವು ಅದನ್ನು ದಣಿವು, ಆಹಾರ ವ್ಯತ್ಯಾಸ ಅಥವಾ ಸಾಮಾನ್ಯ ಸಮಸ್ಯೆ ಎಂದು ಕಡೆಗಣಿಸುತ್ತೇವೆ. ಆದರೆ ಕೆಲವೊಮ್ಮೆ ಈ ಸಣ್ಣ ಲಕ್ಷಣಗಳ ಹಿಂದೆ ಗಂಭೀರ ಕಾಯಿಲೆಯ ಎಚ್ಚರಿಕೆ ಅಡಗಿರಬಹುದು. ಯಕೃತ್ತಿನ ಕ್ಯಾನ್ಸರ್ ಕೂಡ ಅಂಥದ್ದೇ ಒಂದು ರೋಗ. ಪ್ರಾರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದ ಕಾರಣ ಇದನ್ನು ಹೆಚ್ಚು ಸಮಯ ನಿರ್ಲಕ್ಷಿಸಲಾಗುತ್ತದೆ. ಆದರೆ ದೇಹ ನೀಡುವ ಕೆಲವು ಸೂಚನೆಗಳನ್ನು ಸರಿಯಾಗಿ ಗಮನಿಸಿದರೆ ಜೀವ ಉಳಿಸಿಕೊಳ್ಳಲು ಸಾಧ್ಯ.

  • ಹಠಾತ್ ತೂಕ ನಷ್ಟ: ಯಾವುದೇ ಡೈಟ್ ಇಲ್ಲದೇ ಅಥವಾ ಹೆಚ್ಚು ವ್ಯಾಯಾಮ ಮಾಡದೇ ತೂಕ ಕಡಿಮೆಯಾಗುವುದು ಲಿವರ್ ಕ್ಯಾನ್ಸರ್‌ನ ಪ್ರಮುಖ ಸಂಕೇತ. ಹಸಿವಿನ ಕೊರತೆ, ಬೇಗನೆ ಹೊಟ್ಟೆ ತುಂಬಿದ ಅನುಭವದಿಂದ ಆಹಾರ ಸೇವನೆ ಕಡಿಮೆಯಾಗುತ್ತದೆ.
  • ಹೊಟ್ಟೆ ನೋವು ಅಥವಾ ಅಸ್ವಸ್ಥತೆ: ಯಕೃತ್ತು ಇರುವ ಮೇಲಿನ ಬಲಭಾಗದ ಹೊಟ್ಟೆಯಲ್ಲಿ ಆಗಾಗ್ಗೆ ನೋವು, ಬೆವರು ಅಥವಾ ಭುಜದವರೆಗೆ ಹರಿಯುವ ನೋವು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು.
  • ಹಸಿವಿನ ಕೊರತೆ: ನಿರಂತರವಾಗಿ ಊಟದ ಮೇಲೆ ಆಸಕ್ತಿ ಕಡಿಮೆಯಾಗುವುದು, ಸ್ವಲ್ಪ ತಿಂದರೂ ತುಂಬಿದ ಅನುಭವ ಆಗುವುದು ಯಕೃತ್ತಿನ ಕಾರ್ಯದಲ್ಲಿ ತೊಂದರೆಯ ಸೂಚನೆ ಆಗಿರಬಹುದು.
  • ಕಾಮಾಲೆ: ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗಿದರೆ ಇದು ಪಿತ್ತರಸ ನಾಳಿಗಳ ಅಡ್ಡಿಯಿಂದ ಉಂಟಾಗುವ ಗಂಭೀರ ಲಕ್ಷಣ.
  • ಹೊಟ್ಟೆಯ ಊತ: ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿ ಊತ ಕಾಣಿಸಿಕೊಳ್ಳುವುದು ಯಕೃತ್ತಿನ ದೀರ್ಘಕಾಲದ ಸಮಸ್ಯೆಗೆ ಸೂಚನೆ.

ಈ ಲಕ್ಷಣಗಳು ಕಂಡುಬಂದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಸಮಯಕ್ಕೆ ಚಿಕಿತ್ಸೆ ಪಡೆದರೆ ಲಿವರ್ ಕ್ಯಾನ್ಸರ್‌ನ ಅಪಾಯವನ್ನು ಬಹುದೂರ ನಿಯಂತ್ರಿಸಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!