ಹೊಸದಿಗಂತ ವರದಿ ಬಳ್ಳಾರಿ:
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಳೆದ ಡಿ.25ರಂದು ಘೋಷಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಅವರ ಪತ್ನಿ ಗಾಲಿ ಅರುಣಾ ಲಕ್ಷ್ಮೀ ಅವರು ಭಾನುವಾರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಚಾಲನೆ ನೀಡಿದರು. ಇದಕ್ಕೂ ಮುನ್ನ ನಗರದ ಅಹಂಬಾವಿ ಪ್ರದೇಶದ ಜನಾರ್ಧನ ರೆಡ್ಡಿ ಅವರ ಕುಠಿರದ ಎದುರು ಗೋ ಪೂಜೆ ಮಾಡುವ ಮೂಲಕ ನೂತನ ಪಕ್ಷದ ಪ್ರಚಾರದ ಕಾರ್ಯ ಚಟುವಟಿಕೆಗಳಿಗೆ ಅರುಣಾ ಲಕ್ಷ್ಮೀ ಅವರು ಚಾಲನೆ ನೀಡಿದರು.
ಯಾವುದೇ ಶುಭ ಸಮಾರಂಭ ವಿರಲಿ ತಾಲೂಕಿನ ಬೆಣಕಲ್ ಗ್ರಾಮದ ಕುರುಬ ಸಮುದಾಯದ ಕುರೇರ್ ಗಂಗಾಧರಗೌಡ ಅವರ ಮನೆಗೆ ತೆರಳಿ ಅವರಿಂದ ಆರ್ಶಿವಾದ ಪಡೆಯುವುದು ವಾಡಿಕೆ. ಅದರಂತೆ ಮಾಜಿ ಸಚಿವ ಗಾಲಿ ಜನಾರ್ಧನರ ರೆಡ್ಡಿ ಅವರು ನೂತನವಾಗಿ ಸ್ಥಾಪಿಸಿದ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಚಾಲನೆ ಮಾಡುವ ಮುನ್ನ ಕುರುಬ ಸಮುದಾಯದ ಗಂಗಾದರಗೌಡ ಅವರ ನಿವಾಸಕ್ಕೆ ಅರುಣಾ ಲಕ್ಷ್ಮೀ ಅವರು ತೆರಳಿ ಆರ್ಶಿವಾದ ಪಡೆದರು.
ಈ ವೇಳೆ ಗ್ರಾಮದ ಮುತ್ತೈದೆಯರು ಅರುಣಾ ಲಕ್ಷ್ಮೀ ಅವರಿಗೆ ಹೊಸ ಸೀರೆ ಉಡುಗರೆಯಾಗಿ ನೀಡಿ ಉಡಿತುಂಬಿ ಹಾರೈಸಿದರು. ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಿಲ್ಲೆ ಪ್ರವೇಶ ನಿರ್ಭಂಧ ಹಿನ್ನೆಲೆ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಬೆಣಕಲ್ ಗ್ರಾಮಕ್ಕೆ ತೆರಳುತ್ತಿದ್ದಂತೆ ಭವ್ಯ ಸ್ವಾಗತ ದೊರೆಯಿತು. ನಂತರ ಅವರು ಗ್ರಾಮ ದೇವತೆ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಂಜಯ್ ಬೆಟಗೇರಿ, ಬೂಡಾ ಮಾಜಿ ಅಧ್ಯಕ್ಷ ದಮ್ಮೂರ್ ಶೇಖರ್, ಅಲಿಖಾನ್, ಪಾಲಿಕೆ ಮಾಜಿ ಸದಸ್ಯರಾದ ಚೌಧರಿ, ಚಂದ್ರು, ಬಿ.ಕೆ.ಬಿ.ಎನ್.ಮೂರ್ತಿ, ಗ್ರಾಮದ ಪ್ರಮುಖರು ಇತರರು ಉಪಸ್ಥಿತರಿದ್ದರು. ಬ