ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಏರಿಕೆ ಕಂಡಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ಏರಿಕೆ ದರವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.
ಡಿಸೆಂಬರ್‌ನಲ್ಲಿ ನಿರುದ್ಯೋಗ ದರ ಶೇ.8.3ಕ್ಕೆ ಏರಿಕೆಯಾಗಿದೆ. ನಗರ ನಿರುದ್ಯೋಗ ಪ್ರಮಾಣ ಇನ್ನೂ ಏರಿಕೆ ಕಂಡಿದ್ದು, ಉದ್ಯೋಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ನಗರ ನಿರುದ್ಯೋಗ ದರ ಹಿಂದಿನ ತಿಂಗಳು ಶೇ. 8.96ರಷ್ಟಿತ್ತು. ಇದೀಗ ಡಿಸೆಂಬರ್‌ನಲ್ಲಿ ನಿರುದ್ಯೋಗ ದರ ಶೇ.10.9ಕ್ಕೆ ಏರಿದೆ. ಆದರೆ ಗ್ರಾಮೀಣ ನಿರುದ್ಯೋಗ ದರವು ಶೇ. 7.55 ರಿಂದ 7.44ಕ್ಕೆ ಇಳಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಕೋವಿಡ್ ಕಾರಣದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.