ಹೊಸದಿಂತ ಡಿಜಿಟಲ್ ಡೆಸ್ಕ್:
ಒಡಿಶಾದ ಹೊಟೇಲ್ ಒಂದರಲ್ಲಿ ಎರಡು ದಿನದ ಅಂತರದಲ್ಲಿ ಇಬ್ಬರು ರಷ್ಯನ್ ಪ್ರಜೆಗಳು ನಿಗೂಢವಾಗಿ ಮೃತಪಟ್ಟಿದ್ದಾರೆ.
ಇದೀಗ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಸರಕು ಹಡಗಿನಲ್ಲಿ ಮತ್ತೊಬ್ಬ ರಷ್ಯನ್ ಪ್ರಜೆ ಮೃತದೇಹ ಪತ್ತೆಯಾಗಿದೆ.
51 ವರ್ಷದ ಸೆರ್ಗಿ ಮಿಲ್ಯಕೋವ್ ಮೃತಪಟ್ಟ ವ್ಯಕ್ತಿ. ಇವರೂ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸರಕು ಸಾಗಣೆ ಹಡಗಿನ ಸಿಬ್ಬಂದಿಗಳಲ್ಲಿ ಇವರೂ ಒಬ್ಬರಾಗಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.