ಸಿದ್ದೇಶ್ವರ ಶ್ರೀಗಳ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ: ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆ ಬಳಕೆ

ಹೊಸದಿಗಂತ ವರದಿ ವಿಜಯಪುರ: 

ನಡೆದಾಡುವ ದೇವರಾದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ಶ್ರೀಗಂಧದ ಕಟ್ಟಿಗೆಯಿಂದ ಅಗ್ನಿ ಸ್ಪರ್ಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ನಗರದ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಶ್ರೀಗಳ ಪ್ರಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶಕ್ಕೆ ಸಿದ್ಧತೆ ಮಾಡಲಾಗುತ್ತಿದ್ದು, ಬಾಗಲಕೋಟ ಹುಲ್ಯಾಳದಲ್ಲಿ ಬೆಳೆದಿದ್ದ ಶ್ರೀಗಂಧದ ಕಟ್ಟಿಗೆಯನ್ನು ಆಶ್ರಮಕ್ಕೆ ತರಲಾಗಿದೆ.

ಬಾಗಲಕೋಟಯ ಹುಲ್ಯಾಳದ ಗುರುದೇವ ಆಶ್ರಮದ ಶ್ರೀಗಳ ಶಿಷ್ಯ ಹರ್ಷಾನಂದ ಮಹಾಸ್ವಾಮಿಗಳ ಆಶ್ರಮದಲ್ಲಿ ಬೆಳೆದಿದ್ದ ಶ್ರೀಗಂಧ ಕಟ್ಟಿಗೆ ತರಲಾಗಿದೆ. ಸಂಜೆ ಸಕಲ ವಿಧಿವಿಧಾನಗಳ ಮೂಲಕ ಅಗ್ನಿ ಸ್ಪರ್ಶ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!