ʻಚಳಿಯಲ್ಲಿ ಸೀರೆ ಉಟ್ಟು ಡ್ಯಾನ್ಸ್‌ ಮಾಡೋದು ತುಂಬಾ ಕಷ್ಟʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ದೇಶಕ ಬಾಬಿ ನಿರ್ದೇಶನದ ʻವಾಲ್ತೇರು ವೀರಯ್ಯʼ ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕನಾಗಿ ಮತ್ತು ಶ್ರುತಿ ಹಾಸನ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಮಾಸ್‌ ಮಹಾರಾಜ ರವಿತೇಜ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರ ಸಂಕ್ರಾಂತಿಯ ಉಡುಗೊರೆಯಾಗಿ ಜನವರಿ 13 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಂದಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

ಸದ್ಯ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನುವ್ವು ಶ್ರೀದೇವಿ.. ಅಯತೆ.. ನೇನೆ ಚಿರಂಜೀವಿ.. ಎಂಬ ಹಾಡು  ಪ್ರೇಕ್ಷಕರ ಮನಸೂರೆಗೊಳಿಸಿದೆ. ಆದರೆ ಈ ಹಾಡನ್ನು ಮೈನಸ್ ಡಿಗ್ರಿ ಹಿಮದಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡಿನ ಕ್ಲೈಮೇಟ್ ಬಗ್ಗೆ ಚಿರಂಜೀವಿ ಮತ್ತು ಶೇಖರ್ ಮಾಸ್ಟರ್ ಈಗಾಗಲೇ‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಶೃತಿ ಹಾಸನ್‌ ಕೂಡ ಈ ಕುರಿತು ಮಾತನಾಡಿದ್ದಾರೆ.

ಆ ಹಾಡಿನಲ್ಲಿ ಶ್ರುತಿ ಹಾಸನ್ ಸೀರೆ ಉಟ್ಟು ಡ್ಯಾನ್ಸ್ ಮಾಡಿದ್ದಾರೆ. ಹಿಮ ಬೀಳುತ್ತಿರುವಾಗ ಶ್ರುತಿ ಹಾಸನ್ ಸೀರೆಯಲ್ಲಿ ಡ್ಯಾನ್ಸ್ ಮಾಡಿರುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ಇತ್ತೀಚೆಗಷ್ಟೇ ಈ ಹಾಡಿನ ಬಗ್ಗೆ ಶ್ರುತಿ ಹಾಸನ್ ಹೇಳಿದ್ದು..ನಾನು ಮಂಜಿನಲ್ಲಿ ಆ ಹಾಡಿಗೆ ಸೀರೆ ಉಟ್ಟು ಡಾನ್ಸ್‌ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ವಾತಾವರಣವು ನನಗೆ ತುಂಬಾ ಅಹಿತಕರವಾಗಿದ್ದು, ತುಂಬಾ ಕಷ್ಟವಾಯಿತು. ಆದರೆ ಪ್ರೇಕ್ಷಕರನ್ನು ಮೆಚ್ಚಿಸಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಆ ಮೈನಸ್ ಡಿಗ್ರಿ ಚಳಿಯಲ್ಲಿ ತುಂಬಾ ಕಷ್ಟಪಟ್ಟು ಡ್ಯಾನ್ಸ್ ಮಾಡಿದೆವು. ತುಂಬಾ ಕಷ್ಟಪಟ್ಟು ಚಿತ್ರೀಕರಣ ಮುಗಿಸಿದ್ದೇವೆ. ನಾವು ಏನೇ ಮಾಡಿದರೂ ನಮ್ಮ ಕಷ್ಟಗಳೆಲ್ಲ ಪ್ರೇಕ್ಷಕರಿಗಾಗಿಯೇ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!