MUST READ| ಧನ್ಯವಾದ ಹೇಳೋಕೆ ಮುಜುಗರ ಯಾಕೆ? ಪ್ರೀತಿಯಿಂದ ಹೇಳಿ ‘thank you’

ಆಫೀಸ್‌ನಲ್ಲಿ, ಸ್ನೇಹಿತರಿಗೆ, ದೂರದ ವ್ಯಕ್ತಿಗಳಿಗೆ ಅದೆಷ್ಟು ಬಾರಿ ಥ್ಯಾಂಕ್ ಯೂ ಹೇಳಿರಬಹುದು? ಲೆಕ್ಕವೇ ಇಲ್ಲ ಅಲ್ವಾ? ಆದರೆ ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ಹೆಂಡತಿಗೆ, ಗಂಡನಿಗೆ, ಮಕ್ಕಳಿಗೆ, ಅಜ್ಜಿ, ತಾತನಿಗೆ??
ಮನೆಯವರಿಗೆಲ್ಲಾ ಯಾರು ಸಾರಿ, ಥ್ಯಾಂಕ್ಯೂ ಹೇಳ್ತಾರೆ ಅಲ್ವಾ? ಖಂಡಿತಾ ಹೇಳಬೇಕು, ಪ್ರತಿಯೊಂದಕ್ಕು ಧನ್ಯರಾಗಿರೋದ್ರಲ್ಲಿ ಜೀವನದ ಸಾರ ಅಡಗಿದೆ.

ದಿನ ಏಳ್ತೀರಾ, ರಾತ್ರಿ ಮಲಗ್ತೀರಾ ಹೌದಲ್ವಾ? ಒಂದು ದಿನ ಏಳದೇ ಹೋದ್ರೆ?? ಬದುಕಿರುವ ಪ್ರತಿ ಕ್ಷಣವೂ ಬದುಕಿಗೆ ಧನ್ಯರಾಗಿ ಬದುಕಿ.. ಧನ್ಯವಾದ ಹೇಳೋದಕ್ಕೆ ನಾಚಿಕೆಯೂ ಬೇಡ, ಯಾಕೆ ಹೇಳಬೇಕು ಅನ್ನೋ ಭಾವನೆಯೂ ಬೇಡ.. ಡೈರೆಕ್ಟ್ ಆಗಿ ಅಲ್ಲದಿದ್ದರೂ ಈ ರೀತಿಯಾದ್ರೂ ಹೇಳಿ ನೋಡಿ..

  • ಬೆಳಗ್ಗೆ ಆರು ಗಂಟೆಗೆ, ಕಾಲೇಜ್ ಬಸ್ ಬರ‍್ತಾ ಇದೆ, ಲೇಟಾಯ್ತು ಎಂದು ಕೂಗಾಡುವ ನಿಮಗಿಂತ ಮುಂಚೆ ಎದ್ದು ಡಬ್ಬಿ ರೆಡಿ ಮಾಡುವ ಅಮ್ಮನಿಗೆ ಥ್ಯಾಂಕ್ಯೂ ಹೇಳಿ.
  • ಅಪ್ಪ, ಅದು.. ಅದು.. ಎಂದು ರಾಗ ಎಳೆಯುವ ಮುನ್ನ ಜೇಬಿನಿಂದ ದುಡ್ಡು ತೆಗೆದುಕೊಡೋ ಅಪ್ಪನ ಜತೆ ಒಂದು ಕ್ರಿಕೆಟ್ ಮ್ಯಾಚ್ ನೋಡಿ, ಅವರಿಗೆ ನಿಮ್ಮ ಜೊತೆ ಸಮಯ ಕಳೆಯುವುದೇ ಖುಷಿ, ಅದೇ ಥ್ಯಾಂಕ್ಯೂ.
  • ಸ್ನೇಹಿತರ ಜತೆ ಪಾರ್ಟಿ ಮಾಡಿ ಮಧ್ಯರಾತ್ರಿ ಮನೆಗೆ ಬಂದ ನಿಮಗೆ, ಬೆಳಗ್ಗೆ ಎಲ್ಲರೂ ಎಷ್ಟೊತ್ತಿಗೆ ಬಂದ್ಯೋ ಎಂದು ಕೇಳಿದಾಗ, 10 ಗಂಟೆಗೆ ಬಂದ ಎಂದು ಹೇಳುವ ಸಹೋದರಿಗೆ ಧನ್ಯವಾದ ತಿಳಿಸಿ.
  • ಅತ್ತೆ ಮಾವ ಸೀರೆ ಉಡಲೇಬೇಕು ಎಂದು ಪಟ್ಟು ಹಿಡಿದಾಗ, ಅವಳಿಷ್ಟದ ಬಟ್ಟೆ ಹಾಕೋಕೆ ಬಿಡಿ ಎಂದು ಹೇಳುವ ಗಂಡನಿಗೆ ಥ್ಯಾಂಕ್ಸ್ ಹೇಳೋದಿಲ್ವಾ?
  • ಮಗ ಏನೂ ಪ್ರಯೋಜನ ಇಲ್ಲ ಎಂದು ದೊಡ್ಡವರು ಮಾತನಾಡುವಾಗ, ನನ್ನ ಗಂಡನ ಬಗ್ಗೆ ಹಾಗೆಲ್ಲ ಹೇಳ್ಬೇಡಿ ಪ್ಲೀಸ್ ಎಂದು ಪರವಹಿಸುವ ಹೆಂಡತಿ ಜತೆಗೆ ನಿಂತು ಅಡುಗೆ ಮನೆಯಲ್ಲಿ ಕಾಲ ಕಳೆದರೆ ಆಕೆಗೆ ಅದೇ ಖುಷಿ.
  • ಪೆನ್ ಎಲ್ಲಿದೆ ಎಂದು ಹುಡುಕಾಡುವಾಗ ಎರಡು ವರ್ಷದ ಪುಟಾಣಿ ಓಡಿ ಬಂದು ಅಪ್ಪ ಪೆನ್ ಎಂದು ಕೈಗೆ ಕೊಟ್ಟಾಗ, ಖುಷಿಪಟ್ಟು ಮುತ್ತುಕೊಟ್ಟು ಥ್ಯಾಂಕ್ಸ್ ಪುಟ್ಟ ಎಂದುಬಿಡಿ..
  • ಯಾರಿಗೇ ಆಗಲಿ, ಯಾವುದಕ್ಕೇ ಆಗಲಿ ಪ್ರೀತಿಯಿಂದ ಧನ್ಯವಾದ ಹೇಳಿ ಅಥವಾ ನಿಮಗೆ ಅವರ ಕೆಲಸದಿಂದ ಖುಷಿಯಾಗಿದೆ ಎಂದು ತಿಳಿಸೋದಕ್ಕೆ ಬೇರೆ ದಾರಿ ಹುಡುಕಿ..

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!