ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದು,ಈ ವೇಳೆ ಸಿಕ್ಕಿಬಿದ್ದಾಗ ಆತ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಹಿಣಿ ಪ್ರದೇಶದಲ್ಲಿ ಬಸ್ನಲ್ಲಿ ವ್ಯಕ್ತಿಯೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಡಿಟಿಸಿ ಮಾರ್ಷಲ್ ಆರೋಪಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Breaking News: A man named Zakir caught by DTC Bus Marshal, Delhi, while he was flashing his private part to a woman passenger. pic.twitter.com/JTWtamO313
— Ashwini Shrivastava (@AshwiniSahaya) January 4, 2023
ಈ ಕುರಿತು ದೂರು ದಾಖಲಾಗದ ಕಾರಣ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವಿಡಿಯೋ ಪ್ರಕಾರ, ಆರೋಪಿ ಡಿಟಿಸಿ ಬಸ್ನಲ್ಲಿ ಹಸ್ತಮೈಥುನ ಮಾಡಿಕೊಂಡಿದ್ದು ಯುವತಿ ಈ ಬಗ್ಗೆ ಧ್ವನಿಯೆತ್ತಿದಾಗ ಬಸ್ನಲ್ಲಿದ್ದ ಮಾರ್ಷಲ್ ಸಂದೀಪ್ ಆತನನ್ನು ಹಿಡಿದಿದ್ದಾರೆ. ಸಿಕ್ಕಿಬಿದ್ದ ನಂತರ ಆರೋಪಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರೋಪಿ ಬಿಹಾರದ ನಿವಾಸಿಯಾಗಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಇನ್ನೂ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆಗೆ ತನ್ನ ಹೇಳಿಕೆಯನ್ನು ದಾಖಲಿಸಲು ಅಥವಾ ಈ ಸಂಬಂಧ ಯಾವುದೇ ದೂರು ನೀಡಲು ಸಂಪರ್ಕಿಸಿದರೂ ಆಕೆ ನಿರಾಕರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.