‘ಪಠಾಣ್​’ ಸಿನಿಮಾಗೆ ವ್ಯಾಪಕ ವಿರೋಧ: ಸೆನ್ಸಾರ್​ ಮಂಡಳಿಯಿಂದ 13 ಕಡೆಗಳಿಗೆ ಬಿತ್ತು ಕತ್ತರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಪಠಾಣ್​’ ಸಿನಿಮಾ ಕುರಿತು ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅನೇಕರು ಸಿನಿಮಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಇದೀಗ ಸಿನಿಮಾಗೆ ಸೆನ್ಸಾರ್​ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.
ಆದರೆ ಈ ವೇಳೆ ಹಲವು ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ. ಅಚ್ಚರಿ ಏನೆಂದರೆ ‘ಪಠಾಣ್​’ ಚಿತ್ರದಲ್ಲಿ ಬರುವ ‘ಪ್ರಧಾನ ಮಂತ್ರಿ’ ಎಂಬ ಪದವನ್ನು ಅಧ್ಯಕ್ಷ ಅಥವಾ ಮಂತ್ರಿ ಎಂದು ಬದಲಿಸಲಾಗಿದೆ.
‘ಪಠಾಣ್​’ ಚಿತ್ರದ ‘ಬೇಷರಂ ರಂಗ್​..’ ಹಾಡು ರಿಲೀಸ್​ ಆದಾಗಿನಿಂದ ಇಲ್ಲಿಯತನಕ ಅನೇಕ ವಿವಾದಗಳು ಹುಟ್ಟಿಕೊಂಡಿವೆ. ಹಾಗಾಗಿ ಬಹಳ ಕಟ್ಟುನಿಟ್ಟಾಗಿ ಸೆನ್ಸಾರ್​ ಮಂಡಳಿ ಸದಸ್ಯರು ಕತ್ತರಿ ಪ್ರಯೋಗ ಮಾಡಿದ್ದಾರೆ. ‘ 13 ಕಡೆಗಳಲ್ಲಿ ಪ್ರಧಾನಿ ಮಂತ್ರಿ ಬದಲಿಗೆ ಬೇರೆ ಪದವನ್ನು ಹಾಕಲಾಗಿದೆ.
ಅದೇ ರೀತಿ ವಿವಾದ ಹುಟ್ಟುಹಾಕಿರುವ ‘ಬೇಷರಂ ರಂಗ್​..’ ಹಾಡಿನ ಮೂರು ಕಡೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ದೀಪಿಕಾ ಪಡುಕೋಣೆ ಅವರ ಕೆಲವು ಕ್ಲೋಸಪ್​ ಶಾಟ್​ಗಳನ್ನು ತೆಗೆದುಹಾಕಲಾಗಿದೆ. ಕೇಸರಿ ಬಿಕಿನಿಗೆ ಸಂಬಂಧಿಸಿದಂತೆ ಯಾವ ಬದಲಾವಣೆ ಮಾಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಚಿತ್ರದ ಒಟ್ಟು ಅವಧಿ 2 ಗಂಟೆ 26 ನಿಮಿಷ ಇದೆ ಎಂದು ತಿಳಿದುಬಂದಿದೆ.
ನಿಯಮಾವಳಿಗಳ ಪ್ರಕಾರವೇ ಸೆನ್ಸಾರ್​ ಪ್ರಕ್ರಿಯೆ ಮಾಡಲಾಗಿದೆ ಎಂದು ಸೆನ್ಸಾರ್​ ಮಂಡಳಿ ಅಧ್ಯಕ್ಷ ಪ್ರಸೂನ್​ ಜೋಶಿ ಹೇಳಿದ್ದಾರೆ. ‘ಪಠಾಣ್​’ ಚಿತ್ರದ ಶೀರ್ಷಿಕೆ ಬದಲಾಗಬೇಕು ಎಂದು ಕೆಲವರು ಒತ್ತಾಯ ಹೇರಿದ್ದರು. ಆದರೆ ಶೀರ್ಷಿಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಜನವರಿ 25ರಂದು ಅದ್ದೂರಿಯಾಗಿ ಈ ಸಿನಿಮಾ ರಿಲೀಸ್​ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!