ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾಕ್ ನಲ್ಲಿ ಮೋಟಾರ್ ಸೈಕಲ್ ರೇಸ್ನಲ್ಲಿ ಪುರುಷರ ಗಮನ ಬೇರೆಡೆ ಸೆಳೆಯಲು ಅಶ್ಲೀಲವಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಾಳೆಂದು ಆರೋಪಿಸಿ 17 ವರ್ಷದಹುಡುಗಿಯ ಮೇಲೆ ಪುರುಷರ ಗುಂಪು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೇಸ್ ನಲ್ಲಿನ ಸ್ಪರ್ಧಾಳುಗಳನ್ನು ತಬ್ಬಿಬ್ಬುಗೊಳಿಸುವುದಕ್ಕಾಗಿ ಅಸಭ್ಯವಾಗಿ ಡ್ರೆಸ್ ಮಾಡಿಕೊಂಡಿದ್ದಾಳೆಂದು ಆರೋಪಿಸಿ ಹದಿಹರೆಯದ ಹುಡುಗಿಯೊಬ್ಬಳನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ.
Terrifying moment hundreds of men swarm around lone girl, 17, and attack her for 'dressing immodestly and distracting riders' at a motorcycle event in #Iraq pic.twitter.com/1QLM98M4rM
— Patriot (@NamoTheBestPM) January 5, 2023
ಈ ಘಟನೆಯು ಡಿಸೆಂಬರ್ 30, 2022 ರಂದು ನಡೆದಿತ್ತು. ಇರಾಕ್ನ ಕುರ್ದಿಸ್ತಾನ್ ಪ್ರದೇಶದಲ್ಲಿ ನಡೆದ ರೇಸಿಂಗ್ ಈವೆಂಟ್ನಲ್ಲಿ ಪುರುಷ ಜನಸಮೂಹದಿಂದ ಗುರಿಯಾದ ಹುಡುಗಿ ರೈಡರ್ಗಳ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಆಕೆಯ ಗೆಳೆಯ ಅವಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಪ್ರಯತ್ನಿಸಿದ್ದ. ಆದಾಗ್ಯೂ, ಅವರನ್ನು ಜನಸಮೂಹವು ಥಳಿಸಿದೆ.