ಟೀಮ್​ ಇಂಡಿಯಾಕ್ಕೆ ಸಿಗಲಿದೆ ಮತ್ತಷ್ಟು ಬಲ: ಶೀಘ್ರದಲ್ಲೇ ತಂಡಕ್ಕೆ ಸ್ಟಾರ್ ಆಲ್​ರೌಂಡರ್​ ಕಮ್ ಬ್ಯಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಶೀಘ್ರದಲ್ಲೇ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ. ಶುಕ್ರವಾರ ಟ್ವಿಟರ್​ನಲ್ಲಿ ಪೋಟೊವೊಂದನ್ನು ಹಂಚಿಕೊಂಡು ‘ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇನೆ’ ಎಂದು ಹೇಳಿದ್ದಾರೆ.

2022ರ ಏಷ್ಯಾಕಪ್‌ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ, 2 ಟಿ20 ವಿಶ್ವಕಪ್‌ಗೂ ಅಲಭ್ಯರಾಗಿದ್ದರು. ಸುದೀರ್ಘ ಅವಧಿಯವರೆಗೆ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ಇದೀಗ ಮತ್ತೆ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಸುಳಿವನ್ನು ಟ್ವಿಟರ್​ ಪೋಸ್ಟ್​ ಮೂಲಕ ನೀಡಿದ್ದಾರೆ.

ಜತೆಗೆ ಜಡೇಜಾ ಕಮ್​ಬ್ಯಾಕ್​ ಬಗ್ಗೆ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಸುಳಿವು ನೀಡಿದ್ದಾರೆ.

‘ಜಡೇಜಾ ಸಂಪೂರ್ಣ ಚೇತರಿಸಿಕೊಂಡಿರುವುದು ಖುಷಿಯ ವಿಚಾರ. ತಂಡದಲ್ಲಿ ಒಬ್ಬ ಅನುಭವಿ ಆಲ್​ರೌಂಡರ್​ ಕೊರತೆ ಕಾಣುತ್ತಿದೆ’ ಎಂದು ಹೇಳುವ ಮೂಲಕ ಜಡೇಜಾ ಅವರನ್ನು ಶೀಘ್ರದಲ್ಲೇ ತಂಡ ಸೇರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಒಂದೊಮ್ಮೆ ಜಡೇಜಾ ಲಂಕಾ ವಿರುದ್ಧದ ಏಕ ದಿನ ಸರಣಿಗೆ ಆಯ್ಕೆಯಾದರೂ ಅಚ್ಚರಿಯಿಲ್ಲ. ಏಕೆಂದರೆ ಗಾಯದಿಂದ ಹೊರಗುಳಿದಿದ್ದ ಜಸ್​ಪ್ರೀತ್​ ಬುಮ್ರಾ ಅವರನ್ನು ಕೆಲ ದಿನಗಳ ಹಿಂದೆ ತಂಡಕ್ಕೆ ಸೇರಿಸಿ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಇದೀಗ ಜಡೇಜಾ ವಿಚಾರದಲ್ಲಿಯೂ ಇದೇ ರೀತಿ ಸಂಭವಿಸಿದರೆ ಅಚ್ಚರಿ ಪಡಬೇಕಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!