Wednesday, February 1, 2023

Latest Posts

ಕೇಂದ್ರ ಸಚಿವ ರಾಜೀವ್ ಭೇಟಿಯಾದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಕ್ರೋಸಾಫ್ಟ್ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಸತ್ಯ ನಾದೆಲ್ಲ ಕೆಲ ದಿನಗಳಿಂದ ಭಾರತದಲ್ಲಿದ್ದು, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದ ಅವರು ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ್ದಾರೆ.

ಸತ್ಯ ನಾದೆಲ್ಲ ಭಾರತದಲ್ಲಿ ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜೊತೆಗೂ ಮಾತುಕತೆ ನಡೆಸಿದ್ದಾರೆ

ನಿನ್ನೆ ಸತ್ಯ ನಾದೆಲ್ಲ, ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಭಾರತದ ತಂತ್ರಜ್ಞಾನ ಬೆಳವಣಿಗೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದರು. ಬೇಟಿ ಬಳಿಕ ಖುದ್ದು ಮೋದಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದರು. ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತವು ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಯ ನೂತನ ಯುಗವನ್ನು ಪ್ರಾರಂಭಿಸುತ್ತಿದೆ ಎಂದು ಮೋದಿ ಹೇಳಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!