ಕಲಿಯಬೇಕೆಂಬ ಹಂಬಲವಿದ್ದರೆ ವಯಸ್ಸು ಮುಖ್ಯವಲ್ಲ: 89ರ ಹರೆಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನಸ್ಸಿದ್ದರೆ ಮಾರ್ಗ ಎಂಬಂತೆ ಕಲಿಯಬೇಕೆಂಬ ಹಂಬಲವಿದ್ದರೆ ಅಲ್ಲಿ ವಯಸ್ಸು ಮುಖ್ಯವಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಸದರ್ನ್​ ನ್ಯೂ ಹ್ಯಾಂಪ್​ಶೈರ್​ ವಿಶ್ವವಿದ್ಯಾಲಯದಿಂದ ಇಂಗ್ಲಿಷ್​ ಮತ್ತು ಸೃಜನಾತ್ಮಕ ಬರೆವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ 89 ವರ್ಷದ ಅಜ್ಜಿ.
ಅವರೇ 89 ವರ್ಷದ ಜೋನ್​ ಡೋನೋವನ್ .

ನಾಲ್ಕೂವರೆ ವರ್ಷದವರಿದ್ಧಾಗ ಒಂದನೇ ತರಗತಿಗೆ ಸೇರಿದ ಅವರು, 16 ನೇ ವಯಸ್ಸಿನಲ್ಲಿದ್ದಾಗ ಪದವಿಯನ್ನು ಪಡೆದರು. ನಂತರ ಮದುವೆಯಾದರು, ಆರು ಮಕ್ಕಳನ್ನು ಹೆತ್ತರು. ಸಂಪೂರ್ಣ ಕೌಟುಂಬಿಕ ಜವಾಬ್ದಾರಿಯಲ್ಲಿ ಮುಳುಗಿದ ಅವರಿಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಆದರೆ ನಾಲ್ಕು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳಲು ಆಲೋಚಿಸಿದರು.

ಇದೀಗ ಪದವಿ ಸಿಕ್ಕಿದು ಈ ಕುರಿತು ಅನಿಸಿಕೆ ತಿಳಿಸಿದ ಅವರು, ಈ ಪದವಿಯನ್ನು ಪಡೆದ ನಾನು ಗೌರವಿಸಲ್ಪಟ್ಟಿದ್ದೇನೆ. ಪದವಿ ಪಡೆಯುವುದು ತಡವಾಯಿತು ಎಂದು ನನಗೆ ಅನ್ನಿಸಿಯೇ ಇಲ್ಲ ಏಕೆಂದರೆ ಪದವಿ ಪಡೆಯುವುದೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.
ಈ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ 17,700 ಜನರ ಪೈಕಿ ಜೋನ್​ ಅತ್ಯಂತ ಹಿರಿಯ ವ್ಯಕ್ತಿ. ಶಿಕ್ಷಣವನ್ನು ಮುಂದುವರಿಸುವುದಕ್ಕೆ ಸಮಯ, ವಯಸ್ಸು ಮೀರಿತು ಎಂದು ನನಗೆ ಎಂದೂ ಅನ್ನಿಸಿಲ್ಲ ಏಕೆಂದರೆ ಸ್ನಾತಕೋತ್ತರ ಪದವಿ ಹೊಂದುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ ಜೋನ್​.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!