ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಕಾರ್ಪೋರೇಟ್ ಕಂಪನಿಗಳೆಲ್ಲ ವೆಚ್ಚ ಕಡಿತಕ್ಕೆ ಮುಂದಾಗುತ್ತಿವೆ. ಈ ಸಾಲಿಗೆ ಈಗ ಅಮೆರಿಕ ಮೂಲಕ ಹೂಡಿಕೆ ಬ್ಯಾಂಕಿಂಗ್ ಕಂಪನಿ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಸೇರ್ಪಡೆಯಾಗಿದ್ದು 3,200 ಉದ್ಯೋಗಿಗಳನ್ನು ಮನೆಗೆಕಳಿಸಲು ಮುಂದಾಗಿದೆ.
ಲಭ್ಯವಿರೋ ಮಾಹಿತಿಯ ಪ್ರಕಾರ ವೆಚ್ಚಕಡಿತದ ಸಬೆಯ ನಂತರ ಗೋಲ್ಡ್ ಮ್ಯಾನ್ ಸ್ಯಾಚ್ ಕಂಪನಿಯು ಸುಮಾರು 3,200 ಸ್ಥಾನಗಳನ್ನು ತೊಡೆದುಹಾಕಲಿದ್ದಾರೆ ಎಂದು ಬ್ಲೂಮ್ಬರ್ಗ್ ನ್ಯೂಸ್ ಭಾನುವಾರ ವರದಿ ಮಾಡಿದೆ. ವಜಾಗೊಳಿಸುವಿಕೆಯು ಹೆಚ್ಚಿನದಾಗಿ ಬ್ಯಾಂಕ್ಗಳ ಪ್ರಮುಖ ವಿಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕುರಿತು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಹೆಸರು ಹೇಳಲು ಇಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಮೂಲಗಳು ವರದಿ ಮಾಡಿವೆ.