ಕ್ಷಿಪಣಿ ದಾಳಿ ನಡೆಸಿದ ರಷ್ಯಾ: 600 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ.
ಡಾನ್‌ಬಾಸ್‌ನಲ್ಲಿರುವ ಉಕ್ರೇನ್ ಹಿಡಿತದ ಕ್ರಾಮಟೋರ್ಸ್ಕ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದ್ದು, ಉಕ್ರೇನ್‌ನ 600 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ.

ಮೇಕೆಯೆವ್ಕಾ ನಗರದಲ್ಲಿ ರಷ್ಯಾದ ಸೈನಿಕರು ತಾತ್ಕಾಲಿಕ ವಸತಿ ಪ್ರದೇಶದ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದಾಗಿ 90 ಕ್ಕೂ ಹೆಚ್ಚು ರಷ್ಯಾ ಸೈನಿಕ ಪಡೆಗಳು ಮೃತಪಟ್ಟಿದ್ದವು. ಈ ದಾಳಿಗೆ ರಷ್ಯಾ ಪ್ರತ್ಯುತ್ತರ ನೀಡಿದ್ದು, 600ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!