ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಬ್ಯೂಟಿ ಸಮಂತಾ ಅನಾರೋಗ್ಯದ ಬಳಿಕ ಭಾರತಕ್ಕೆ ವಾಪಸಾಗಿದ್ದಾರೆ. ಮತ್ತೆ ಸಿನಿಮಾ ಕಾರ್ಯಗಳಲ್ಲಿ ಆಕ್ಟೀವ್ ಆಗಿದ್ದಾರೆ.
ತಮ್ಮ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
ಇಂದು ನಡೆದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸ್ಯಾಮ್ ಕೂಡ ಭಾಗಿಯಾಗಿದ್ದರು.ಸದ್ಯ ಚೇತರಿಸಿಕೊಂಡಿರುವ ಸಮಂತಾ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಶಾಕುಂತಲಂ ಸಿನಿಮಾಗಾಗಿ ಅನೇಕ ನಾಯಕಿಯರನ್ನು ಪ್ರಯತ್ನ ಪಟ್ಟೆವು. ಕೊನೆಗೆ ನಿರ್ಮಾಪಕಿ ನೀಲಿಮಾ ಅವರೇ ಸಮಂತಾ ಅವರ ಹೆಸರು ಹೇಳಿದರು. ಈ ವೇಳೆ ವೇದಿಕೆಯಲ್ಲಿ ಸಮಂತಾ ಗಳಗಳನೇ ಅತ್ತಿದ್ದಾರೆ.
ಈ ಕ್ಷಣಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ. ಆದರೆ ಕೆಲವೊಮ್ಮೆ ಕೆಲವು ಮ್ಯಾಜಿಕ್ ನಡೆಯುತ್ತದೆ. `ಶಾಕುಂತಲಂ’ ವಿಷಯದಲ್ಲೂ ಅದೇ ಆಯಿತು. ಎಷ್ಟೇ ಕಷ್ಟಗಳು ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನು ಪ್ರೀತಿಸುತ್ತಿದೆ ಎಂದು ಸಮಂತಾ ಹೇಳಿದರು.
ಅಂದಹಾಗೆ ಬಹನಿರೀಕ್ಷೆಯ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ.