ಉತ್ತರಾಖಂಡದಲ್ಲೂ ಪತ್ತೆಯಾಯಿತು ಕೊರೋನಾ ಹೊಸ ರೂಪಾಂತರಿ XBB 1.5!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾರಣವಾದ COVID-19 ಹೊಸ ತಳಿ ಎಕ್ಸ್​ಬಿಬಿ 1.5 ವೈರಸ್ ಉತ್ತರಾಖಂಡದಲ್ಲೂ ವರದಿಯಾಗಿದ್ದು, ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಇಂದು ಉತ್ತರಾಖಂಡದಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದ್ದು, ಇದಕ್ಕೂ ಮುನ್ನ ಗುಜರಾತ್ನಲ್ಲಿ ಮೂರು, ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಒಕ್ಕೂಟ(INSACOG) ತಿಳಿಸಿದೆ.

ಎಕ್ಸ್​ಬಿಬಿ 1.5 ತಳಿಯು ಓಮಿಕ್ರಾನ್ ನ ಎಕ್ಸ್​ಬಿಬಿ ರೂಪಾಂತರದ ಸಂಬಂಧಿಯಾಗಿದ್ದು, ಒಮಿಕ್ರಾನ್ ನ ಸಬ್ವೇರಿಯೆಂಟ್ ಎಕ್ಸ್​​​ಬಿಬಿ 1.5 ಪ್ರಕರಣವು ಡಿಸೆಂಬರ್ 31 ರಂದು ಗುಜರಾತ್ನಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು.

ಅಮೆರಿಕದಲ್ಲಿ ಶೇ. 40.5 ರಷ್ಟು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಎಕ್ಸ್​​ಬಿಬಿ 1.5 ರೂಪಾಂತರಿ ಭಾರತದಲ್ಲೂ ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!