ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ…ಜ.20ರೊಳಗೆ ಅರ್ಜಿ ಹಾಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 20,2022 ಕೊನೆಯ ದಿನವಾಗಿರುತ್ತದೆ.

ಅರ್ಹತೆಗಳು :
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು 1 ರಿಂದ 10ನೇ ತರಗತಿಯೊಳಗೆ ವ್ಯಾಸಂಗ ಮಾಡುತ್ತಿರಬೇಕು.

ವಿದ್ಯಾರ್ಥಿವೇತನ ಸೌಲಭ್ಯದ ವಿವರಗಳು :
ಅ) ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿವೇತನ:
1 ರಿಂದ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕ/ಬಾಲಕಿಗೆ 2,000/-ರೂ

ಬಿ) ರಾಜ್ಯ ವಿದ್ಯಾರ್ಥಿವೇತನ ದರಗಳು:
1 ರಿಂದ 5ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕ/ಬಾಲಕಿಗೆ 750/-ರೂ
6 ರಿಂದ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕ/ಬಾಲಕಿಗೆ 900/-ರೂ
9 ರಿಂದ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕ/ಬಾಲಕಿಗೆ 1,000/-ರೂ

ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು:
ಕುಟುಂಬದ ವಾರ್ಷಿಕ ಆದಾಯ ಮಿತಿ:
ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿವೇತನ : ರೂ.2.50/ವಾರ್ಷಿಕ ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ : ರೂ.1.00 ಲಕ್ಷ/ವಾರ್ಷಿಕ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಮಾತ್ರ ರೂ.44,500/-ರೂ ವಾರ್ಷಿಕ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ/ದಾಖಲೆ :

ವಿದ್ಯಾರ್ಥಿಗಳು ಶಾಲೆಯಲ್ಲಿ ಪಡೆದಿರುವ ಬಗ್ಗೆ ಸ್ಯಾಟ್ಸ್ ಐಡಿ ತಿಳಿಯಲು ವೆಬ್‌ಸೈಟ್ https://sts.karnataka.gov.in/SATS/ ಗೆ ಭೇಟಿ ನೀಡಿ.
* ವಿದ್ಯಾರ್ಥಿಯ ಆಧಾರ್ ಸಂಖ್ಯೆ
* ಪೋಷಕರ ಆಧಾರ್ ಸಂಖ್ಯೆ
* ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ
* ಆದಾಯ ಪ್ರಮಾಣ ಪತ್ರದ ಆರ್‌.ಡಿ ಸಂಖ್ಯೆ
* ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ, ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ
* ಹಿಂದಿನ ಸಾಲಿನಲ್ಲಿಇ ವಿದ್ಯಾರ್ಥಿವೇತನ ಪಡೆದಿದ್ದಲ್ಲಿ ಹಿಂದಿನ ಸಾಲಿನ ಅರ್ಜಿ ಸಂಖ್ಯೆ
* ಆಧಾರ್ ಸಂಖ್ಯೆ ಇಲ್ಲದಿದ್ದಲ್ಲಿ, ಆಧಾರ್ ನೊಂದಣಿ ಮಾಡಿಸಿದ ಇ.ಐ.ಡಿ ಸಂಖ್ಯೆ. ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್‌.ಸಿ ಸಂಖ್ಯೆ, ಬ್ಯಾಂಕಿನ ವಿಳಾಸ
* ಪೋಷಕರ ಆಧಾರ್ ನಂಬರ್ ಗೆ ಲಿಂಕ್ ಮಾಡಿರುವ ಮೊಬೈಲ್‌ ನಂ ಹಾಗೂ ಭೌತಿಕ ಅನುಮತಿ ಪತ್ರ

ಅಧಿಕೃತ ವೆಬ್‌ಸೈಟ್ : https://bcwd.karnataka.gov.in/#

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!