ಫೆ.17ಕ್ಕೆ ರಾಜ್ಯ ಬಜೆಟ್:‌ ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ಇರಲಿದೆ ಎಂದ ಸಿಎಂ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ರಾಜ್ಯದ ಬಜೆಟ್ ಫೆ.17 ರಂದು ಮಂಡನೆ ಮಾಡಲಿದ್ದೇನೆ. ಉತ್ತರ ಕರ್ನಾಟಕ ಅಭಿವೃದ್ಧಿ ವಿಶೇಷ ಅನುದಾನದ ನಿರೀಕ್ಷಿಸಬಹುದಾ ಎಂಬ ಪ್ರಶ್ನೆಗೆ ಕಾದುನೋಡಿ ಎನ್ನುವ ಮೂಲಕ ಪರೋಕ್ಷವಾಗಿ ಅನುದಾನ ನೀಡಲಿರುವ ಬಗ್ಗೆ ಮಾತನಾಡಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹುಬ್ಬಳ್ಳಿ ಅಂಕೋಲಾ ಯೋಜನೆ ಜಾರಿಗೆ ಕುರಿತು ಕೇಂದ್ರ ಪರಿಸರ ಇಲಾಖೆ ಸ್ಪಷ್ಟನೆ ಕೇಳಿತ್ತು. ಈಗ ಅದೇ ರೀತಿ ಮಹದಾಯಿ ಯೋಜನೆ ಜಾರಿಗೆ ಕುರಿತು ರಾಜ್ಯದ ಸ್ಪಷ್ಟನೆ ಪರಿಸರ ಇಲಾಖೆ ಕೇಳಿದೆ. ಇದರಲ್ಲಿ ಆತಂಕಪಡುವ ವಿಚಾರವಿಲ್ಲ. ಅವರಿಗೆ ಬೇಕಾದುದನ್ನು ಕೊಡುತ್ತೇವೆ ಎಂದರು.

ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಹುಬ್ಬಳ್ಳಿ -ಧಾರವಾಡದಲ್ಲಿ ಮೊದಲ ಬಾರಿಗೆ ಯುವಜನೋತ್ಸವಕ್ಕೆ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಇದನ್ನು ಮಾದರಿ ಕಾರ್ಯಕ್ರಮ ಆಗಿಸಲು ಒತ್ತು ನೀಡಲಾಗುತ್ತದೆ. ಐದು ದಿನಗಳ ಯುವಜನೋತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಸಂಬಂಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನು ಚುನಾವಣೆಗೆ ನಿಲ್ಲಲು ಆಯ್ಕೆ ಮಾಡಕೊಂಡಿರುವುದು ಅವರ ವೈಯಕ್ತಿಕ ನಿರ್ಧಾರ. ಅವರನ್ನು ಗೆಲ್ಲಿಸುವುದು ಬಿಡುವುದು, ಅಲ್ಲಿನ ಜನರಿಗೆ ಬಿಟ್ಟಿದ್ದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here