ಗುಳಿ ಕೆನ್ನೆ ಹೊಂದಿರುವವರ ಈ ಸಂಗತಿಗಳನ್ನು ತಿಳಿಯಲೇಬೇಕು !

ಸಾಮಾನ್ಯವಾಗಿ ಗಂಡಾಗಲಿ ಅಥವಾ ಹೆಣ್ಣಾಗಿರಲಿ, ಗುಳಿ ಕೆನ್ನೆಯನ್ನು ಹೊಂದಿದ್ರೆ ಅವರ ಮುಖದ ಸೌಂದರ್ಯವೇ ಬೇರೆ ರೀತಿಯಿಂದ ಕೂಡಿರುತ್ತದೆ. ಗುಳಿ ಕೆನ್ನೆ ಕಂಡ್ರೆ ಎಂಥವರೂ ಒಮ್ಮೆ ಕಣ್ಣಾಯಿಸುತ್ತಾರೆ ಮತ್ತವರ ನಗು ತುಂಬಾನೆ ಸುಂದರವಾಗಿರುತ್ತೆ. ಈ ಗುಳಿ ಕೆನ್ನೆ ಹಿಂದಿರುವ ಸಂಗತಿಗಳನ್ನು ಇಲ್ಲಿ ತಿಳಿಯೋಣ.

* ಒಬ್ಬ ವ್ಯಕ್ತಿಯು ನಕ್ಕಾಗ ಆತನ ಮುಖದಲ್ಲಿ ಗುಳಿ ಕೆನ್ನೆ ಮೂಡಿದರೆ ʼಜೆಲಾಸಿನ್‌ʼ ಎಂದು ಕರೆಯಲಾಗುತ್ತದೆ. ಜೆಲಾಸಿನ್‌ ಪದವು ಗ್ರೀಕ್‌ ನಿಂದ ಬಂದಿದ್ದು, ʼಜೆಲಾಯನ್‌ʼ ಎಂದರೆ ನಗು ಎಂದರ್ಥ.

* ಗುಳಿ ಕೆನ್ನೆ ಮೂಡಿದರೆ ಮುಖವು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಅದು
ಅನುವಂಶಿಕವಾಗಿ ಬಂದಿರುತ್ತದೆ ಎಂದು ವೈದ್ಯಕೀಯವಾಗಿ ನಿರೂಪಿತವಾಗಿದೆ.

* ಗುಳಿ ಕೆನ್ನೆ ಹೊಂದಿರುವವರು ತುಂಬಾನೆ ಸುಂದರವಾಗಿರುತ್ತಾರೆ. ಅವರು ಹೆಚ್ಚು ಸಂತೋಷದಾಯಕರಾಗಿರುತ್ತಾರೆ ಮತ್ತು ಹೆಚ್ಚು ಅದೃಷ್ಟವಂತರು. ಅದಾಗ್ಯೂ ಅವರಲ್ಲಿ ಹೆಚ್ಚು ಆತ್ಮವಿಶ್ವಾಸವಿರುತ್ತದೆ ಎಂದು ಮನಶಾಸ್ತ್ರಗಳ ಪ್ರಕಾರ ಹೇಳಲಾಗುತ್ತದೆ.

* ಈ ಗುಳಿ ಕೆನ್ನೆ ಹೊಂದಿರುವ ಜನಸಂಖ್ಯೆಯ ಪ್ರಮಾಣವು ಶೇ.20%ರಷ್ಟಿದೆ.

* ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವ ಯುಗದಲ್ಲಿ ಗುಳಿ ಕೆನ್ನೆಗೆ ಭಾರೀ ಬೇಡಿಕೆಯಿದ್ದು, ಮೊದಲ ಬಾರಿಗೆ 1936ರಲ್ಲಿ ನ್ಯೂಯಾರ್ಕ್‌ ನ ಇಸಾಬೆಲ್ಲಾ ಗಿಲ್ಬರ್ಟ್‌ ಎನ್ನುವ ಮಹಿಳೆ ಗುಳಿ ಕೆನ್ನೆಯನ್ನು ಮಾಡಿಸಿಕೊಂಡಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!