ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೂ ಮುನ್ನವೇ ಮಗು ಹೊಂದಿದ್ದ 20 ವರ್ಷದ ಯುವತಿ ಬಾತ್ರೂಂ ಕಿಟಕಿಯಿಂದ ಮಗುವನ್ನು ಎಸೆದು ಕೊಂದಿದ್ದಾಳೆ. ನೋಯ್ಡಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ಸಾಮಾಜಿಕ ಕಳಂಕಕ್ಕೆ ಹೆದರಿ ನ್ಯೂ ಅಶೋಕ್ ವಿಹಾರದ ಅಪಾರ್ಟ್ಮೆಂಟ್ ಬಾತ್ರೂಂನಿಂದ ಮಗುವನ್ನು ಎಸೆದಿದ್ದಾಳೆ.
ರಸ್ತೆಯಲ್ಲಿ ಮಗುವನ್ನು ಕಂಡ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಅಷ್ಟರೊಳಗೆ ಮೃತಪಟ್ಟಿದ್ದಿ, ರಕ್ತದ ಕಲೆಗಳ ಜಾಡು ಹಿಡಿದು ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.
ನನಗೆ ಮದುವೆಯಾಗಿಲ್ಲ ಕಳಂಕಕ್ಕೆ ಹೆದರಿ ಮಗುವನ್ನು ಎಸೆದು ಎಂದು ಯುವತಿ ಒಪ್ಪಿಕೊಂಡಿದ್ದಾಳೆ. ತನಿಖೆ ನಡೆಯುತ್ತಿದೆ.