ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಶಬರಿಮಲೆ ಯಾತ್ರೆಗೆ ಬರುವ ಮಾಲಾಧಾರಿಗಳು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ದೊಡ್ಡ ಪೋಸ್ಟರ್ ಹಿಡಿದು ಬರುವುದಕ್ಕೆ ಅವಕಾಶ ಇಲ್ಲ.
ಈ ರೀತಿ ಫೋಟೊ,ಪೋಸ್ಟರ್ಗಳನ್ನು ತರುವುದನ್ನು ತಡೆಯುವಂತೆ ಶಬರಿಮಲೆ ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಭಕ್ತರು ದೇವಾಲಯದ ಆವರಣದಲ್ಲಿ ಭಕ್ತಿಪೂರ್ವಕವಾಗಿ ಪೂಜಿಸುವಂತೆ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ. ಭಕ್ತರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಫೋಟೊ ಹಿಡಿದು ಸಂಗೀತ ವಾದ್ಯಗಳೊಂದಿಗೆ ಪ್ರದರ್ಶನ ನೀಡುತ್ತಿರುವ ಕಾರಣ ಕೋರ್ಟ್ ಆದೇಶ ನೀಡಿದೆ.
ಸ್ವಾಮಿ ಅಯ್ಯಪ್ಪನಿಗೆ ಭಕ್ತಿ ತೋರಿಸಿ ಸಂಪ್ರದಾಯ ಪಾಲಿಸಬೇಕು ಆದರೆ ಸೆಲೆಬ್ರಿಟಿಗಳು ಫೋಟೊ ಹಿಡಿದು ತರುವುದು ಸೂಕ್ತವಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.