ಯುವಜನೋತ್ಸವದಲ್ಲಿ ಹುಬ್ಬೇರಿಸಲಿವೆ ಸಾಹಸ-ಜಲ ಕ್ರೀಡೆಗಳು..

– ಮಹಾಂತೇಶ ಕಣವಿ

ಧಾರವಾಡ, ಸಾಂಸ್ಕೃತಿಕ ನಗರಿ ವಿದ್ಯಾಕಾಶಿಯಲ್ಲಿ ನಡೆಯಲಿರುವ ರಾಷ್ಟ್ರೀಯ 26ನೇ ಯುವಜನೋತ್ಸವ ಹಲವು ವಿಶೇಷತೆ ಹಾಗೂ ಪ್ರಥಮಗಳಿಂದ ಕೂಡಿದೆ. ಉತ್ಸವದಲ್ಲಿ ಸಾಹಸ ಮತ್ತು ಜಲ ಕ್ರೀಡೆಗಳ ಪ್ರದರ್ಶನಕ್ಕೂ ಅವಕಾಶ ನೀಡಿರುವುದು ಬಹುವೈಶಿಷ್ಟ್ಯ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸ್ಕೂಬಾ ಡೈವಿಂಗ್, ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಶಿಲಾರೋಹಣ ಮತ್ತು ಜಕ್ಕೂರ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯೂ ವೈಮಾನಿಕ ತರಬೇತಿ ಹಮ್ಮಿಕೊಂಡಿರುವುದು ವಿಶೇಷ. ನಿತ್ಯ ನಾಲ್ಕು ಗಂಟೆಗಳ ಪ್ರಾಯೋಗಿಕ ಮತ್ತು ಥೇರಿ ಕ್ಲಾಸ್ ನಡೆಸುವ ಮೂಲಕ ಕ್ರ್ಯಾಷ್ ಕೋರ್ಸ್ ಆಯೋಜಿಸಿದೆ. ನೋಂದಾಯಿತ ಸ್ಪರ್ಧಾಳುಗಳು, ಯುವಕ, ಯುವತಿಯರಿಗೂ ಅವಕಾಶವಿದೆ. ನಿತ್ಯ ಕೇವಲ 50 ಜನರಿಗೆ ಮಾತ್ರ ಅವಕಾಶ ಉಂಟು.

ಸೃಜನಾ ರಂಗಮಂದಿರ ಪಕ್ಕದ ಸ್ಥಳದಲ್ಲಿ ವೈಮಾನಿಕ ತರಬೇತಿಗೆ ಸಣ್ಣ ಪ್ರಮಾಣದ ವಿಮಾನ ನಿಲ್ದಾಣ, ಶಿಲಾರೋಹಣ ತರಬೇತಿಗೆ 32 ಅಡಿ ಉದ್ದದ ಕೃತಕ ಗೋಡೆ ನಿರ್ಮಿಸಿದೆ. ಕೇವಲ ಐದು ಅವಯಲ್ಲಿ 700 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ವೈಮಾನಿಕ ತರಬೇತಿ:
ಆಸಕ್ತ ಯುವಕರಿಗೆ ವೈಮಾನಿಕ ಕ್ಷೇತ್ರದ ಉದ್ಯೋಗ ಅವಕಾಶ ಪರಿಚಯಿಸುವ ಮತ್ತು ಅಭಿರುಚಿ ಮೂಡಿಸುವ ಉದ್ದೇಶದಿಂದ ಜಕ್ಕೂರು ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆಯ ಸಹಯೋಗದಲ್ಲಿ ವೈಮಾನಿಕ ಕಾರ್ಯಾಗಾರ ಆಯೋಜನೆ ಶ್ಲಾಘನೀಯ. ನಿತ್ಯ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30 ರವರೆಗೆ ತರಬೇತಿ ನಡೆಯಲಿದೆ. ಈ ತರಬೇತಿಗೆ ಎರಡು ಆಸನದ ವಿಮಾನ ಬಳಸುತ್ತಿದೆ. ಇದು ಜಕ್ಕೂರು ತರಬೇತಿ ಶಾಲೆಯ ಸಣ್ಣ ವಿಮಾನವಾಗಿದ್ದು, ತರಬೇತಿ ಶಾಲೆಯ ಅಕಾರಿಗಳೇ ತರಬೇತಿ ನೀಡುತ್ತಾರೆ.

ಶಿಲಾರೋಹಣ ತರಬೇತಿ:
ಭಾರತೀಯ ಸೈನ್ಯದಲ್ಲಿ ಪರ್ವತಾರೋಹಣ, ಶಿಲಾರೋಹಣ ಮಹತ್ವದ ವಿಂಗ್. ಯುವಸಮೂಹದಲ್ಲಿ ಪರ್ವತಾರೋಹಣ ಕ್ಷೇತ್ರದ ಸರ್ಕಾರಿ ಉದ್ಯೋಗ ಅವಕಾಶ ಪರಿಚಯಿಸುವ ಉದ್ದೇಶದಿಂದ ಶಿಲಾರೋಹಣ ಕುರಿತು ಈ ಕ್ರ್ಯಾಷ್ ಕೋರ್ಸ್ ಸಂಘಟಿಸಿದೆ.

ಸ್ಕೂಬಾ ಡೈವಿಂಗ್:
ಭಾರತದ ನೆಲ, ವಾಯು ಮತ್ತು ಪರ್ವತಗಳೊಂದಿಗೆ ಜಲ ಸಾಹಸಗಳು ಪ್ರಸಿದ್ಧಿ. ಜಲಪಡೆ ಸೇವೆಯಲ್ಲಿ ಅವಕಾಶಗಲಿವೆ. ಈ ಬಗ್ಗೆ ಯುವಕರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ತಮ್ಮಯ್ಯ ಅಕಾಡೆಮಿ ಉತ್ಸವದಲ್ಲಿ ಸ್ಕೂಬಾಡೈವಿಂಗ್ ತರಬೇತಿ ಆಯೋಜಿಸಿದೆ.

ಹುಬ್ಬಳ್ಳಿಯ ಎಪಿಎಂಸಿ ಹತ್ತಿರದ ಮಹಾನಗರ ಪಾಲಿಕೆಯ ಈಜು ಕೋಳದಲ್ಲಿ ಸ್ಕೂಬಾ ಡೈವಿಂಗ್ ತರಬೇತಿ ನಡೆಯಲಿದೆ. ಸುಮಾರು 16 ಅಡಿ ಆಳ ಈ ಈಜು ಕೋಳದಲ್ಲಿ ಜಲ ಸುರಕ್ಷತೆ, ಜಲ ಸಾಹಸ, ಬಳಸುವ ಸಲಕರಣೆ ಬಗ್ಗೆ ಮಾಹಿತಿ ನೀಡಲಿದೆ.

ಜಲಸಾಹಸ ಕ್ರೀಡೆ:
ಧಾರವಾಡ ಕೆಲಗೇರಿ ಕೆರೆಯಲ್ಲಿ ಜಲಸಾಹಸ ಕ್ರೀಡೆ ಸಂಘಟಿಸಿದೆ. ಇದಕ್ಕೆ ಜೆಟ್ಸ್ಕೀ (ವಾಟರ್ ಸ್ಕೂಟರ್), ಸ್ಪೀಡ್ ಬೋಟ್, ಕಯಾಕ್ (ಹುಟ್ಟು ಹಾಕುವ ಬೋಟ್), ರಾಫ್ಟ್ (ಗಾಳಿ ತು೦ಬಿದ ಬೋಟ್) ಮತ್ತು ಬನಾನ್ ರೈಡ್, ಬಂಪಿ ರೈಡ್ಗಳು ಆಯೋಜಿಸಿದೆ.

ಮೌಂಟೆನ್ ಬೈಕ್ ರೈಡಿಂಗ್
ಉತ್ಸವದಲ್ಲಿ ಮೌಂಟೆನ್ ಬೈಕ್ ರೈಡಿಂಗ್ ಇದೆ. ಇದಕ್ಕೆ ಕವಿವಿ ಪತ್ರಿಕೋದ್ಯಮ ವಿಭಾಗದ ಮುಂಭಾಗದ ಸಪ್ತ ಗುಡ್ಡಗಳ ಪ್ರದೇಶ ಬಳಸುತ್ತಿದೆ. ಈ ಕ್ರೀಡೆಗೆ ಹೆಚ್ಚಿನ ಸಿಬ್ಬಂದಿ, ವಾಹನ, ಆಂಬುಲೆನ್ಸ್ ಅಗತ್ಯ ಹೀಗಾಗಿ ಅಗತ್ಯ ಸುರಕ್ಷತಾ ಕ್ರಮಗಳು ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!