ಹಬ್ಬ, ರಜೆದಿನಗಳಲ್ಲೂ ಕೆಲಸ ಮಾಡಿದ್ರೆ ಸಿಗುತ್ತೆ ಹೆಚ್ಚುವರಿ ವೇತನ ; ಕೆಎಸ್‌ಆರ್‌ಟಿಸಿ

ಹಬ್ಬ ಮತ್ತು ರಜೆ ದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.

ಹಬ್ಬದ ಸೀಸನ್‌ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜನದಟ್ಟಣೆಯನ್ನು ನಿರ್ವಹಿಸಲು ಸಿಬ್ಬಂದಿಗಳ ಲಭ್ಯತೆಯ ಉದ್ದೇಶದಿಂದ ಜನವರಿ 23 ರಿಂದ ಜೂನ್ 23ರ ವರೆಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಸಾರ್ವತ್ರಿಕ/ ಹಬ್ಬದ ರಜಾ ದಿನಗಳಿಗೆ ಸೀಮಿತಗೊಳಿಸಿ ಸದರಿ ಸಾರ್ವತ್ರಿಕ/ ಹಬ್ಬದ ರಜೆ ದಿನದಂದು ಕರ್ತವ್ಯ ನಿರ್ವಹಿಸಿದಲ್ಲಿ ಹೆಚ್ಚುವರಿ ವೇತನ (Double, Wages) ನೀಡಲು ಸೂಕ್ತಾಧಿಕಾರಿಗಳು ಮಂಜೂರಾತಿ ನೀಡಿರುತ್ತಾರೆ ಎಂದು ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಆದೇಶದ ಅನ್ವಯ ಸಾರ್ವತ್ರಿಕ/ ಹಬ್ಬದ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ವೆಚ್ಚುವರಿ ವೇತನ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!