ಹೊಸದಿಗಂತ ವರದಿ ಕಲಬುರಗಿ:
ಬಿಜೆಪಿ ಪಕ್ಷದವರು ಪವಿತ್ರವಾದ ಕೇಸರಿ ಬಟ್ಟೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪವಿತ್ರ ಕೇಸರಿ ಬಟ್ಟೆ ಹಾಕಿ,ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು,ಇಂತವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸ್ಯಾಂಟ್ರೋ ರವಿ ಬಿಜೆಪಿ ಕಾಯಕತ೯:
ಜಗದೀಶ್ ಎಂಬ ವ್ಯಕ್ತಿ ಕಳೆದ ಜನವರಿ 22 ರಂದು ಸ್ಯಾಂಟ್ರೋ ರವಿ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ನಾನು ಬಿಜೆಪಿಯ ಸಕ್ರಿಯ ಕಾಯ೯ಕತ೯ನೆಂದು ಸ್ಯಾಂಟ್ರೋ ರವಿ ಬರೆದು ಕೊಟ್ಟಿದ್ದಾನೆ ಎಂದು ಹೇಳಿದರು.
ಇದರ ಜೊತೆಗೆ ನಾನು ಮೂರು ನಾಲ್ಕು ವರ್ಷಗಳ ಕಾಲದಿಂದಲೂ ಬಿಜೆಪಿ ಕಾಯ೯ಕತ೯ನಾಗಿ ಕೆಲಸ ಮಾಡುತ್ತಿದ್ದೇನೆ.ಬಿಜೆಪಿಯ ಹಲವು ಶಾಸಕರು, ಸಚಿವರ ಜೊತೆಗೆ ನನ್ನ ಒಡನಾಟ ಇದ್ದು,ಹೀಗಾಗಿ ಹಲವು ಅಧಿಕಾರಿಗಳನ್ನು ವಗಾ೯ವಣೆ ಮಾಡಿಸಿದ್ದೇನೆ ಎಂದು ಪೋಲಿಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯವರು ಒಂದು ವಷ೯ದಿಂದ ಅವನನ್ನು ಬಿಟ್ಟು, ಇವಾಗ ಅರೆಸ್ಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಹೇಳಿದರು.