ಯುವಜನೋತ್ಸವ : ಹುಬ್ಬಳ್ಳಿ – ಧಾರವಾಡ ನಡುವೆ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ನಿಮಿತ್ತ ಜ.11 ಮತ್ತು 12ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಧಾರವಾಡದ ನಡುವೆ ತಡೆರಹಿತ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದರಿಂದಾಗಿ ನಗರದಲ್ಲಿ ಖಾಸಗಿ ವಾಹನಗಳ ಸಂಚಾರದ ದಟ್ಟಣೆ ನಿಯಂತ್ರಿಸುವುದರ ಜೊತೆಗೆ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವ ಆಲೋಚನೆಯನ್ನು ಕೈಗೊಂಡಿದೆ.

ರೈಲುಗಳ ವೇಳಾಪಟ್ಟಿ ಇಲ್ಲಿದೆ :
ರೈಲು ಸಂಖ್ಯೆ 07369/07370 ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 11 ರಂದು ಧಾರವಾಡ – ಎಸ್‌ ಎಸ್‌ ಎಸ್ ಹುಬ್ಬಳ್ಳಿ (07369 ) ವಿಶೇಷ ರೈಲು ಮಧ್ಯಾಹ್ನ 12:30ಕ್ಕೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 01:05 ಗಂಟೆಗೆ ಎಸ್‌ ಎಸ್‌ ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಮರಳಿ ಎಸ್‌ ಎಸ್‌ ಎಸ್ ಹುಬ್ಬಳ್ಳಿ – ಧಾರವಾಡ (07370) ವಿಶೇಷ ರೈಲು ಹುಬ್ಬಳ್ಳಿಯಿಂದ ಸಂಜೆ 4 ಗಂಟೆಗೆ ಹೊರಟು ಸಂಜೆ 04:28 ಗಂಟೆಗೆ ಧಾರವಾಡ ತಲುಪಲಿದೆ.

ರೈಲು ಸಂಖ್ಯೆ 07371/07372 ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 12 ರಂದು ಧಾರವಾಡ – ಎಸ್‌ಎಸ್‌ಎಸ್ ಹುಬ್ಬಳ್ಳಿ (07371) ವಿಶೇಷ ರೈಲು ಮಧ್ಯಾಹ್ನ 12 ಗಂಟೆಗೆ ಧಾರವಾಡದಿಂದ ಹೊರಟು 12:30 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಮರಳಿ, ರೈಲು ಸಂಖ್ಯೆ 07372 ಎಸ್‌ಎಸ್‌ಎಸ್ ಹುಬ್ಬಳ್ಳಿ-ಧಾರವಾಡ ವಿಶೇಷ ರೈಲು ಸಂಜೆ 6 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಸಂಜೆ 06:30 ಕ್ಕೆ ಧಾರವಾಡ ತಲುಪಲಿದೆ.

ರೈಲು ಸಂಖ್ಯೆ 07373/07374 ಧಾರವಾಡ – ಎಸ್‌ಎಸ್‌ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 12 ರಂದು ಧಾರವಾಡ – ಎಸ್‌ ಎಸ್‌ಎಸ್ ಹುಬ್ಬಳ್ಳಿ (07373) ವಿಶೇಷ ರೈಲು ಮಧ್ಯಾಹ್ನ 12:30 ಗಂಟೆಗೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 1 ಗಂಟೆಗೆ ಎಸ್‌ ಎಸ್‌ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದಿರುಗುವಾಗ ಎಸ್‌ ಎಸ್‌ ಎಸ್ ಹುಬ್ಬಳ್ಳಿ – ಧಾರವಾಡ (07374) ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 06:30 ಗಂಟೆಗೆ ಹೊರಟು ಅದೇ ದಿನ ಸಂಜೆ 7 ಗಂಟೆಗೆ ಧಾರವಾಡ ತಲುಪಲಿದೆ.

ರೈಲು ಸಂಖ್ಯೆ 07375/07376 ಧಾರವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 12 ರಂದು ಧಾರವಾಡ – ಎಸ್‌ ಎಸ್‌ ಎಸ್ ಹುಬ್ಬಳ್ಳಿ (07375) ವಿಶೇಷ ರೈಲು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 01:30 ಗಂಟೆಗೆ ಎಸ್‌ ಎಸ್‌ ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದಿರುಗುವಾಗ ಎಸ್‌ ಎಸ್‌ ಎಸ್ ಹುಬ್ಬಳ್ಳಿ – ಧಾರವಾಡ (07376) ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 7 ಗಂಟೆಗೆ ಹೊರಟು ಅದೇ ದಿನ ಸಂಜೆ 7:30 ಗಂಟೆಗೆ ಧಾರವಾಡ ತಲುಪಲಿದೆ.

ಇಲ್ಲಿ ತಿಳಿಸಲಾದ ವಿಶೇಷ ರೈಲುಗಳು ಸ್ಲೀಪರ್ ಬೋಗಿಗಳು, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳೊಂದಿಗೆ/ಅಂಗವಿಕಲ ಸ್ನೇಹಿ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ. ಎಸ್ ಎಸ್ ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಸಂಚರಿಸುವ ಈ ರೈಲುಗಳು ತಡೆ ರಹಿತವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!