ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದು, ಇದೀಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಮೊದಲ ಹಂತದ ಶೂಟಿಂಗ್ ನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿರುವ ರಾಗಿಣಿ ಖುಷಿ ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಗಿಣಿ ‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ (೨೦೨೨) ಹೆಚ್ಚಾಗಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ’ ಎಂದರು.
ಚಿತ್ರದ ಹೆಸರು ‘ವಾಕ್ರೋ ಹೌಸ್’ ಸಂಪೂರ್ಣ ಶೂಟಿಂಗ್ ಮುಗಿದ ಮೇಲೆ ತಂಡದೊಂದಿಗೆ ಮತ್ತೆ ಬರುತ್ತೇನೆ ಎಂದಿದ್ದಾರೆ.
ನನ್ನ ಮೊದಲ ಹಿಂದಿ ಸಿನಿಮಾ ಹಾರರ್ ಆಗಿದ್ದು, ಒಳ್ಳೆ ಕಥೆ, ಪಾತ್ರ ಇದಿದ್ದರಿಂದ ಖುಷಿಯಾಗಿದ್ದೇನೆ. ಈ ಹಿಂದಿ ಸಿನಿಮಾ ಮಾಡತಾ ಇರೋದು ತಂದೆ-ತಾಯಿಗೆ ಖುಷಿ ಇದೆ. ಅವರ ಸಪೋರ್ಟ್ ನಿಂದಲೇ ನಾನು ಇಷ್ಟು ಬೆಳೆಯಲು ಆಗಿದ್ದು. ನಮ್ಮ ಕಷ್ಟ ಸುಖಗಳನ್ನು ತಂದೆ-ತಾಯಿಗಳಿಗೆ ಹೇಳಿಕೊಳ್ಳಬೇಕು ಆಗ ಅವರು ನಮಗೆ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾರೆ’ ಎನ್ನುತ್ತಾರೆ ರಾಗಿಣಿ.
ಹಿಂದಿ ಸಿನಿಮಾ ಜೊತೆಗೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ ೨ ಸಿನಿಮಾ ಮಾಡತಾ ಇದ್ದೇನೆ. ಇಂದು ಎಲ್ಲಾ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾಗಳು ಬರತಾ ಇದ್ದು ನಟನೆಗೆ ಒಳ್ಳೆ ಕ್ಯಾರೆಕ್ಟರ್ ಸಿಗತಾ ಇವೆ. ಒಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ ಎಂದರು.
ಇದೇ ವೇಳೆ ಕನ್ನಡದ ‘ವಿಕ್ರಾಂತ್ ರೋಣ’, ‘ಕಾಂತಾರ’ ಸಿನಿಮಾಗಳು ಆಸ್ಕರ್ ಗೆ ಹೋಗಿರೋದು ಖುಷಿ ಕೊಟ್ಟಿತು’ ಎಂದಿದ್ದಾರೆ
ಕಾಂತಾರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಕನ್ನಡ ಇಂಡಸ್ಟ್ರೀಸ್ ಇಂದು ನ್ಯಾಷನಲ್ ಇಂಟರ್ನ್ಯಾಷನಲ್ ಹೋಗಿದೆ. ಇದು ನಮ್ಮ ಹೆಮ್ಮೆ ಎನ್ನಬಹುದು. ತುಂಬಾ ಕಡೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆ ಮಾತುಗಳನ್ನು ಆಡುತ್ತಾರೆ ಎಂದರು.