ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಿನಿ ತಾರೆಯರೆಂದ್ರೆ ಸಾಕು ಎಂತವರಿಗೂ ಒಮ್ಮೆ ಕಣ್ಣರಳಿಸಿ ನೋಡಬೇಕೆನಿಸುತ್ತೆ. ಹೊಳಪಿನ ಚರ್ಮ, ಮೋಹಕ ನಗು, ತೆಳ್ಳಗಿನ ದೇಹ, ರೇಷ್ಮೆಯಂತಹ ಕೂದಲು ಹೊಂದಿರುವ ಸಿನಿ ತಾರೆಯರು ನಿಜಕ್ಕೂ ಅಷ್ಟೊಂದು ಸುಂದರವಾಗಿ ಕಾಣುವುದು ಹೇಗೆ ಎನ್ನುವುದು ತಿಳಿದಿದೆಯಾ ? ಹಾಗಾದ್ರೆ ನಾವಿಲ್ಲಿ ಮಾಹಿತಿ ನೀಡ್ತೀವಿ ನೋಡಿ.
ನಟ ಅಥವಾ ನಟಿಯಾಗಿರಲಿ ಹುಟ್ಟಿನಿಂದಲೇ ಸುಂದರವಾದ ಮೈಕಟ್ಟು ಮತ್ತು ಹೆಚ್ಚಿನ ಸೌಂದರ್ಯವನ್ನು ಹೊಂದಿರುವುದಿಲ್ಲ. ಅವರಲ್ಲಿರುವ ಗುರಿ ಮತ್ತು ಉದ್ದೇಶಗಳು ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸುತ್ತವೆ.
ಸಾಮಾನ್ಯವಾಗಿ ಸಿನಿ ಜಗತ್ತಿನಲ್ಲಿರುವವರು ಉತ್ತಮ ಆಹಾರ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸುತ್ತಾರೆ. ಉದಾಹರಣೆಗೆ ಬೆಳಗಿನ ಗ್ರೀನ್ ಟೀ ಸೇವನೆ, ನಂತರ ವ್ಯಾಯಾಮ ಅಂತೆಲ್ಲಾ ಸಮಯವನ್ನು ಮೀಸಲಿಡುತ್ತಾರೆ. ಅವರ ಬ್ಯೂಟಿ ಸಿಕ್ರೇಟ್ ಬಗೆಗಿನ ಒಂದಷ್ಟು ಮಾಹಿತಿ ತಿಳಿಯಿರಿ.
- ನಟ ನಟಿಯರು ಬೆಳಗೆದ್ದು ಬಿಸಿ ನೀರು ಅಥವಾ ಗ್ರೀನ್ ಟೀ ಅನ್ನು ಕುಡಿಯುವ ಮೂಲಕ ತಮ್ಮ ದೇಹ ಮತ್ತು ಚರ್ಮದ ಆರೋಗ್ಯದ ಕಡೆ ಗಮನಹರಿಸುತ್ತಾರೆ.
- ದೈಹಿಕವಾಗಿ ಸಶಕ್ತರಾಗಿರಲು ಮತ್ತು ಉತ್ತಮ ರೀತಿಯಾಗಿ ಕಾಣಲು ದಿನನಿತ್ಯವೂ ವ್ಯಾಯಾಮ ಮಾಡುತ್ತಾರೆ.
- ಲಘು ಮತ್ತು ಮಿತ ಆಹಾರ ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಮಾಡುತ್ತಾರೆ.
- ಬಿಸಿಲಿರಲಿ, ಮಳೆಯಿರಲಿ ಎಂಥಹ ಸಂದರ್ಭಗಳಿಗೂ ಸೂಕ್ತವಾಗುವ ಕ್ರೀಂ ಮತ್ತು ಇತರೆ ಸೌಂದರ್ಯವರ್ಧಕ ವಸ್ತುಗಳನ್ನು ಬಳಸುತ್ತಾರೆ.
- ಆಸಕ್ತಿ ಮತ್ತು ಮೈಕಟ್ಟಿಗೆ ಹೋಲುವಂತಹ ಬಟ್ಟೆಗಳನ್ನು ಧರಿಸುತ್ತಾರೆ.
- ಕೂದಲಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಮತ್ತು ಅಗತ್ಯ ಸೌಂದರ್ಯಕಗಳನ್ನು ಬಳಸುತ್ತಾರೆ.
- ಇದಲ್ಲದೆಯೇ ಸೌಂದರ್ಯವನ್ನು ಕಾಪಾಡಿಕೊಳ್ಳಲು ತಜ್ಞರ ಸಲಹೆಗಳನ್ನು ಪಡೆಯುತ್ತಾರೆ.
- ಸಾಮಾನ್ಯವಾಗಿ ಸಿನಿ ತಾರೆಯರು ಬಿಡುವಿನ ವೇಳೆಗಳಲ್ಲಿ ಬ್ಯೂಟಿ ಪಾರ್ಲರ್ ಗಳಿಗೆ ಭೇಟಿ ನೀಡಿ ಸೌಂದರ್ಯ ಸಂಬಂಧಿಸಿದ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಾರೆ.