ಪ್ರಯಾಣಕ್ಕೆ ಸಿದ್ಧವಾಗಿದೆ ಎಂವಿ ಗಂಗಾ ವಿಲಾಸ್‌: ನಾಳೆ ಪ್ರಧಾನಿ ಮೋದಿ ಉದ್ಘಾಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದ ವಾರಾಣಸಿಯಿಂದ ಗಂಗಾ ವಿಲಾಸ್ (Ganga Vilas) ನಾಳೆಯಿಂದ ತನ್ನ ಪ್ರಯಾಣ ಪ್ರಾರಂಭಿಸುತ್ತದೆ.

ಇದು ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರ ನೌಕೆ ಆಗಿದ್ದು, ಜ.13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ʼಎಂವಿ ಗಂಗಾ ವಿಲಾಸ್‌ʼ ಐಷರಾಮಿ ಪ್ರವಾಸಿ ನೌಕೆ. 62.5 ಮೀಟರ್‌ ಉದ್ದ ಮತ್ತು 12.8 ಮೀಟರ್‌ ಅಗಲ ಇರುವ ಈ ನೌಕೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. 51 ದಿನಗಳಲ್ಲಿ ಸುಮಾರು 3,200 ಕಿಮೀ ಪ್ರಯಾಣಿಸಿ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ.

ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಗಂಗಾ ವಿಲಾಸ್‌ ಸಾಗುತ್ತದೆ. ಎಂವಿ ಗಂಗಾ ವಿಲಾಸ್ 3 ಡೆಕ್‌ಗಳನ್ನು ಹೊಂದಿದ್ದು, ಜತೆಗೆ 36 ಪ್ರವಾಸಿಗರ (Tourists) ಸಾಮರ್ಥ್ಯದೊಂದಿಗೆ 18 ಸೂಟ್‌ ಸೇರಿ ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನಿಂದ 32 ಪ್ರವಾಸಿಗರು ಸಂಪೂರ್ಣ ಪ್ರಯಾಣಕ್ಕೆ ಹಣ ನೀಡಿದ್ದಾರೆ .

ಇದೊಂದು ಐಷರಾಮಿ ಪ್ರವಾಸಿ ನೌಕೆ. ಪಂಚತಾರಾ ಹೋಟೆಲ್‌ ಮಾದರಿ ವ್ಯವಸ್ಥೆಯನ್ನು ನೌಕೆ ಹೊಂದಿದೆ. ನೌಕೆಯಲ್ಲಿ 3 ಅಂತಸ್ತುಗಳಿವೆ. ಪ್ರವಾಸಿಗರು ಆರಾಮಾಗಿ, ಎಂಜಾಯ್‌ ಮಾಡುತ್ತಾ ನದಿ ಮಾರ್ಗವಾಗಿ ಪ್ರವಾಸ ಕೈಗೊಳ್ಳಬಹುದು.

ಎಂವಿ ಗಂಗಾ ವಿಲಾಸ್ ಕ್ರೂಸ್ ಅನ್ನು ದೇಶದ ಅತ್ಯುತ್ತಮವಾದದ್ದನ್ನು ಹೊರತರಲು ವಿನ್ಯಾಸಗೊಳಿಸಲಾಗಿದೆ. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಹಲ್ದಿಯಾ ಮಲ್ಟಿ ಮಾದರಿ ಟರ್ಮಿನಲ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಹಲ್ದಿಯಾ ಮಲ್ಟಿ ಮಾದರಿ ಟರ್ಮಿನಲ್ ವರ್ಷಕ್ಕೆ ಸುಮಾರು 3 ಮಿಲಿಯನ್ ಮೆಟ್ರಿಕ್ ಟನ್ (MMTPA) ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬರ್ತ್‌ಗಳನ್ನು ಸುಮಾರು 3000 ಡೆಡ್‌ವೈಟ್ ಟನ್ (DWT) ವರೆಗಿನ ಹಡಗುಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!