2022ರಲ್ಲಿ 22 ಮಿಲಿಯನ್‌ ಆರ್ಡರ್‌ ಪೂರೈಸಿದೆಯಂತೆ ಉಡಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ನವೋದ್ದಿಮೆ ಕ್ಷೇತ್ರದಲ್ಲಿ ಯುನಿಕಾರ್ನ್‌ ಆಗಿ ಪರಿವರ್ತನೆ ಹೊಂದಿ ಯಶಸ್ವಿ ಸ್ಟಾರ್ಟಪ್‌ ಎಂಬ ಖ್ಯಾತಿಗೆ ಪಾತ್ರವಾಗಿರೋ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಉಡಾನ್‌ ತನ್ನ ವ್ಯಾಪಾರದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು 2022ರಲ್ಲಿ 22 ಮಿಲಿಯನ್‌ ಗೂ ಅಧಿಕ ಆರ್ಡರ್‌ಗಳನ್ನು ಪೂರೈಸಿರುವುದಾಗಿ ಹೇಳಿಕೊಂಡಿದೆ. ಸುಮಾರು 1.7 ಬಿಲಿಯನ್‌ ಗಳಷ್ಟು ಉತ್ಪನ್ನಗಳನ್ನು ಜನರಿಗೆ ತಲುಪಿಸಲಾಗಿದ್ದು ದೇಶದಾದ್ಯಂತ 1,200 ನಗರ ಮತ್ತು ಪಟ್ಟಣಗಳ 12,500ಕ್ಕೂ ಅಧಿಕ ಪಿನ್‌ ಕೋಡ್‌ ಪ್ರದೇಶಗಳನ್ನು ತಲುಪಲಾಗಿದೆ ಎಂದು ಬುಧವಾರ ಕಂಪನಿ ಹೇಳಿಕೊಂಡಿದೆ.

ಉಡಾನ್‌ ಕಂಪನಿಯು ಬಿಸಿನೆಸ್-ಟು-ಬಿಸಿನೆಸ್ (B2B) ಸೇವೆಯನ್ನೊದಗಿಸುವ ಕಂಪನಿಯಾಗಿದ್ದು ಸಣ್ಣ ಉತ್ಪಾದಕರು, ರೈತರು ಮತ್ತು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

“ಆಹಾರ, ಎಫ್‌ಎಂಸಿಜಿ, ಎಲೆಕ್ಟ್ರಾನಿಕ್ಸ್, ಜೀವನಶೈಲಿ, ಸಾಮಾನ್ಯ ಸರಕುಗಳು, ಫಾರ್ಮಾ ಉತ್ಪನ್ನಗಳು ಹೆಚ್ಚಿನ ಬೇಡಿಕೆ ಹೊಂದಿವೆ, ನಾವು ನಮ್ಮ ವ್ಯಾಪಾರದಲ್ಲಿ ಗಣನೀಯ ಪ್ರಗತಿ ಕಾಣುತ್ತಿದ್ದೇವೆ. ಬೇರೆ ಬೇರೆ ಬ್ರ್ಯಾಂಡ್‌ ಗಳೊಂದಿಗೆ ನಮ್ಮ ಸಂಬಂಧಗಳು ವಿಸ್ತರಿಸುತ್ತಿದ್ದು ಅವು ಬಲಗೊಳ್ಳುತ್ತಿವೆ” ಎಂದು ಉಡಾನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ವೈಭವ್ ಗುಪ್ತಾ ಹೇಳಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, 2022ರಲ್ಲಿ ಉಡಾನ್‌ ಪ್ಲಾಟ್‌ಫಾರ್ಮ್ ತಾಜಾ ಉತ್ಪನ್ನಗಳು, ಎಫ್‌ಎಂಸಿಜಿ, ಸ್ಟೇಪಲ್ಸ್ ಮತ್ತು ಫಾರ್ಮಾವನ್ನು ಒಳಗೊಂಡಂತೆ ಅಗತ್ಯ ವಸ್ತುಗಳ ವಿಭಾಗದಲ್ಲಿ 17 ಮಿಲಿಯನ್ ಆರ್ಡರ್‌ಗಳನ್ನು ಮತ್ತು 9 ಲಕ್ಷ ಟನ್‌ಗಳಿಗಿಂತ ಹೆಚ್ಚು ಉತ್ಪನ್ನಗಳನ್ನು ರವಾನಿಸಿದ್ದು ಅಗತ್ಯ ವಸ್ತುಗಳ ಬೇಡಿಕೆಯು ಗಣನೀಯವಾಗಿ ಏರಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!