ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಾರಿನಿಂದ ಎಳೆದೊಯ್ದ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಕಾರು ಚಾಲಕ ಕೂಡ ತನಗೆ ಕಿರುಕುಳ ನೀಡಿದ್ದಾನೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ 47 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ರಿಯಾಲಿಟಿ ಚೆಕ್’ಗಾಗಿ ದೆಹಲಿಯ ಬೀದಿಗಳಲ್ಲಿದ್ದಾಗ ಮಲಿವಾಲ್ ಅವ್ರನ್ನ ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಎಳೆದೊಯ್ದು ಕಿರುಕುಳ ನೀಡಲಾಯಿತು ಎಂದು ಆರೋಪಿಸಲಾಗಿದೆ.
ಮುಂಜಾನೆ 3.11ರ ಸುಮಾರಿಗೆ ಹರೀಶ್ ಚಂದ್ರ ಬಲೆನೊ ಕಾರಿನಲ್ಲಿ ತನ್ನ ಬಳಿಗೆ ಬಂದು ಒಳಗೆ ಹೋಗಲು ಒತ್ತಾಯಿಸಿದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.