ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡ ನಟಿ ಪ್ರೇಮಾ!

ಹೊಸ ದಿಗಂತ್ ಡಿಜಿಟಲ್ ಡೆಸ್ಕ್:

ಕೊಡಗಿನ ಬೆಡಗಿ, ಚಿತ್ರನಟಿ ಪ್ರೇಮಾ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆಯೇ? ಹೀಗೊಂದು ಸುದ್ದಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪೂರಕವೆಂಬಂತೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿರುವ ಪ್ರೇಮಾ, ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.
ಖಾಸಗಿ ಕಾರ್ಯಕ್ರಮಕ್ಕೆಂದು ಕಾಪುವಿಗೆ ಭೇಟಿ ನೀಡಿದ್ದ ಅವರು, ಕೊರಗಜ್ಜ ಸನ್ನಿಧಿಗೂ ತೆರಳಿ ಎರಡನೇ ಮದುವೆಗೆ ತಾನು ಈಗಾಗಲೇ ವರನನ್ನು ನೋಡಿದ್ದು, ಅದೇ ವರನನ್ನು ವರಿಸಲು ಆಶೀರ್ವಾದ ಮಾಡುವಂತೆ ಬೇಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಾಪುವಿನ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಟ್ಟ ಪ್ರೇಮಾ ಅಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದು, ಪ್ರೇಮಾ ಅವರ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಅವರ ಪತ್ನಿ ಅನು ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!