ಹೊಸದಿಗಂತ ಡಿಜಿಟಲ್ ಡೆಸ್ಕ್ :
ಲಾಸ್ ಏಂಜಲೀಸ್‌ನಲ್ಲಿ ವರ್ಷಾಚರಣೆ ವೇಳೆ ಗುಂಡಿನ ದಾಳಿ : ಹಲವು ಮಂದಿ ಸಾವು !
ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿರುವ ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಚೈನೀಸ್ ಲೂನಾರ್ ನ್ಯೂ ಇಯರ್ ಆಚರಣೆಯ ವೇಳೆ ದುಷ್ಕರ್ಮಿ ನಡೆಸಿದ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಚೀನೀ ಚಂದ್ರನ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ರಾತ್ರಿ ಸುಮಾರು 10 ಗಂಟೆಯ ಬಳಿಕ ಈ ಘಟನೆ ನಡೆದಿದೆ.