ಸೂರ್ಯನ ಮೇಲಿನ ಬೃಹತ್‌ ಕಪ್ಪು ಕಲೆ ಸೆರೆ ಹಿಡಿದ ಭಾರತದ ಸೌರ ವೀಕ್ಷಣಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಮ್ಮೆಲ್ಲ ಶಕ್ತಿಗಳ ಮೂಲವಾಗಿರೋ ಸೂರ್ಯನ ಮೇಲಿರುವ ಬೃಹತ್‌ ಕಪ್ಪುಕಲೆಯೊಂದನ್ನು ಭಾರತದ ಸೌರ ವೀಕ್ಷಣಾಲಯವೊಂದು ಸೆರೆ ಹಿಡಿದಿದೆ. ಏನೂ ಪ್ರಜ್ವಲಿಸೋ ಸೂರ್ಯನ ಮೇಲೆ ಕಪ್ಪು ಕಲೆಯಾ? ಬರಿಗಣ್ಣಿನಲ್ಲಿ ದಿಟ್ಟಿಸಲಾಗದಷ್ಟು ಪ್ರಕಾಶಮಾನವಾಗಿಉರಿವ ಸೂರ್ಯನ ಮೇಲೆ ಕಪ್ಪು ಕಲೆ ಇರೋಕೆ ಹೇಗೆ ಸಾಧ್ಯ ಅಂತ ನಿಮಗೆ ಗೊಂದಲವಾಗಿರಬಹುದು.. ಆದರೆ ಇದು ನಿಜ. ಸೂರ್ಯ ಅಷ್ಟೊಂದು ಪ್ರಕಾಶಮಾನವಾಗಿ ಬೆಳಗುತ್ತಾನೆ ಎನ್ನುವುದು ಸತ್ಯವೇ ಆದರೂ ಆತನ ಮೇಲೆಯೂ ಕೆಲ ಕಲೆಗಳಿರುತ್ತವೆ. ಸೂರ್ಯ ಪ್ರಕಾಶದೆದುರು ಇವು ಬರಿಗಣ್ಣಿಗೆ ಗೋಚರಿಸುವುದಿಲ್ಲವಷ್ಟೇ. ಸೌರ ವಿಜ್ಞಾನಿಗಳು ಇದಕ್ಕೆ ವೈಜ್ಞಾನಿಕ ಕಾರಣವನ್ನೂ ನೀಡುತ್ತಾರೆ.

ಅದೇನೆಂದರೆ ಈ ರೀತಿಯ ಕಲೆಗಳು (ಸನ್‌ಸ್ಪಾಟ್) ಎಂದರೆ ಸೂರ್ಯನ ಮೇಲ್ಮೈಯಲ್ಲಿ ಗಾಢವಾಗಿ ಕಾಣುವ ಪ್ರದೇಶಗಳಾಗಿವೆ. ಸೂರ್ಯನಲ್ಲಿರುವ ಅನಿಲಗಳು ಅಣುಮಿಲನ ಪ್ರಕ್ರಿಯೆಯಿಂದ ಹೊರಸೂಸುವ ವಿದ್ಯುದೀಯ ಅಂಶದಿಂದ ಪ್ರಭಾವಿಸಲ್ಪಟ್ಟು ಕಾಂತೀಯ ಶಕ್ತಿ ಪ್ರದೇಶವನ್ನು ಉಂಟು ಮಾಡುತ್ತವೆ. ಸೂರ್ಯನಲ್ಲಿ ನಿರಂತರವಾಗಿ ಚಲಿಸುವ ಕೆಲ ಅನಿಲಗಳು ಈ ಕಾಂತೀಯ ಶಕ್ತಿಯಿಂದ ಪ್ರಭಾವಿಸಲ್ಪಟ್ಟು ಈ ರೀತಿಯ ಸನ್‌ಸ್ಪಾಟ್‌ ಗಳ ಹುಟ್ಟಿಗೆ ಕಾರಣವಾಗುತ್ತದೆ ಎಂಬುದು ವಿಜ್ಞಾನಿಗಳು ನೀಡೋ ವಿಶ್ಲೇಷಣೆ. ಇವು ಯಾಕೆ ಗಾಢವಾಗಿರುತ್ತವೆ ಅಥವಾ ಕಪ್ಪಾಗಿರುತ್ತವೆ ಎಂದರೆ ಸೂರ್ಯನ ಇತರ ಭಾಗಗಳಿಗಿಂತ ಇವು ತಂಪಾಗಿರುತ್ತವೆ. ಹಾಗಾಗಿ ಇವು ಕಪ್ಪಾಗಿ ಗಾಢವಾಗಿ ಗೋಚರಿಸುತ್ತವೆ.

ಪ್ರಸ್ತುತ, ಪಳನಿ ಬೆಟ್ಟಗಳ ದಕ್ಷಿಣ ತುದಿಯಲ್ಲಿರುವ ಕೊಡೈಕೆನಾಲ್ ಸೌರ ವೀಕ್ಷಣಾಲಯವು ಸೂರ್ಯನ ಮೇಲಿರುವ ಅತಿದೊಡ್ಡ ಕಪ್ಪು ಕಲೆಯನ್ನು ಸೆರೆ ಹಿಡಿದಿದ್ದು AR3190 ಎಂದು ಹೆಸರಿಸಿದೆ. ಇದು ಇಲ್ಲಿಯವರೆಗೆ ದಾಖಲಾದ ಸೌರಕಲೆಗಳಲ್ಲಿಯೇ ಅತ್ಯಂತ ದೊಡ್ಡದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!