ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರತಿನಿತ್ಯ ಮಾಡಿದ ಅಡುಗೆಯನ್ನೇ ಮಾಡಬೇಕು ಎಂದಾಗ ಬೇಸರ ಆಗಬಹುದು. ಆದ್ರೆ ಆಗಾಗ್ಗೆ ವಿವಿಧ ಖಾದ್ಯಗಳನ್ನು ಪ್ರಯತ್ನಿಸಿ ಸವಿದಾಗ ಅದರಲ್ಲಿ ಸಿಗುವ ಸಂತೋಷವೇ ಬೇರೆ. ಅದಷ್ಟೇ ಅಲ್ಲ, ಇವತ್ತಿನ ಅಡುಗೆಯೂ ಆಗಿ ಹೋಯಿತಲ್ಲ ಎಂಬ ಸಮಾಧಾನವೂ ಸಿಗುತ್ತದೆ.
ಇಂದು ಊಟಕ್ಕೆ ಏನು ಅಡುಗೆ ಮಾಡಬೇಕು ಎಂದು ಚಿಂತಿಸುತ್ತಿರುವವರು ಈ ದಿಢೀರ್ ಬದನೆಕಾಯಿ ಗೊಜ್ಜು ಒಮ್ಮೆ ಮಾಡಿ ನೋಡಿ.
ಬೇಕಾಗಿರುವ ಸಾಮಾಗ್ರಿಗಳು :
ಬದನೆಕಾಯಿ
ಟಮೋಟೊ
ಈರುಳ್ಳಿ
ಮೆಣಸಿನಕಾಯಿ
ಹುಣಸೆಹಣ್ಣು
ನಿಂಬೆಹಣ್ಣು
ಜೀರಿಗೆ
ಕೊತ್ತಂಬರಿ
ಉಪ್ಪು
ಮಾಡುವ ವಿಧಾನ :
* ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ
* ಈಗ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಈರುಳ್ಳಿ, ಟಮೋಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಫ್ರೈ ಮಾಡಿ
* ಅಂತಿಮವಾಗಿ ಅದಕ್ಕೆ ಕೊತ್ತಂಬರಿ ಹಾಕಿ
* ಈಗ ಫ್ರೈಗೆ ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಕಲ್ಲಿನಲ್ಲಿ ಅರೆಯಿರಿ ಅಥವಾ ಮಸೆಯಿರಿ.
ಈಗ ದಿಢೀರ್ ಬದನೆಕಾಯಿ ಗೊಜ್ಜು ಚಪಾತಿ ಅಥವಾ ಅನ್ನದೊಂದಿಗೆ ಸವಿಯಲು ಸಿದ್ಧ.