ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಕೆಲವೊಮ್ಮ ನೀವು ಮಾನಸಿಕ ನಿಂದನೆಗೆ ಒಳಗಾಗಿದ್ದರೂ ಅದು ಮಾನಸಿಕ ನಿಂದನೆ ಎನ್ನುವುದು ತಿಳಿಯೋದಿಲ್ಲ. ಮೆಂಟಲ್ ಅಬ್ಯೂಸ್ ಎಂದು ಯಾವಾಗ ಕರೆಯಬಹುದು ನೋಡಿ..
- ಸ್ಟುಪಿಡ್, ಲೂಸರ್, ಹೀಗೆ ಹೆಸರುಗಳನ್ನು ಕರೆಯೋಕೆ ಆರಂಭಿಸೋದು, ಕರೆಯಬೇಡಿ ಎಂದಾಗಲೂ ನಿಲ್ಲಿಸದೇ ಇರೋದು.
- ನಿಮ್ಮ ಕ್ಯಾರೆಕ್ಟರ್ ಬಗ್ಗೆ ಕೀಳಾಗಿ ಮಾತನಾಡೋದು, ಯಾವಾಗಲೂ ಹೀಗೆ ಮಾಡ್ತ್ಯ, ನೀನು ಇಂತವನೇ/ ಇಂತವಳೇ ಎಂದು ಹೇಳೋದು.
- ನಿಮ್ಮ ಮೇಲೆ ಏರುದನಿಯಲ್ಲಿ ಕಿರುಚಾಡೋದು, ಬೈಗುಳಗಳನ್ನು ಹೇಳೋದು.
- ನೀನು ಟ್ರೈ ಮಾಡ್ತಿದ್ದೀಯಾ ಆದ್ರೆ ಇದು ನಿನ್ನ ಬ್ರೈನ್ ಮೀರಿದ ವಿಷಯ, ನಿನಗೆ ಅರ್ಥ ಆಗೋದಿಲ್ಲ ಎಂದು ಕೀಳಾಗಿ ಕಾಣೋದು
- ಬೇರೆಯವರ ಎದುರಿಗೆ, ಪಬ್ಲಿಕ್ನಲ್ಲಿ ನಿಮ್ಮ ಮೇಲೆ ಕೂಗೋದು, ನಿಮ್ಮ ಸೀಕ್ರೆಟ್ ಬೇರೆ ಅವರಿಗೆ ಹೇಳೋದು.
- ನಿಮ್ಮ ಬಗ್ಗೆ ಮಾತನಾಡುವಾಗ ಅಟೆಂಶನ್ ನೀಡದೆ, ನೀನು ಮುಖ್ಯ ಅಲ್ಲ ಅನ್ನೋ ರೀತಿ ನಡೆದುಕೊಳ್ಳೋದು.
- ನಿಮ್ಮ ಕೆಟ್ಟದಾಗಿ ಮಾತನಾಡೋದು, ಮಾತನಾಡಬೇಡಿ ಎಂದು ಹೇಳಿದರೆ ತಮಾಷೆಯನ್ನು ತಮಾಷೆಯಾಗಿ ತಗೊ ಎಂದು ಹೇಳೋದು
- ನೋಡೋಕೆ ಹೇಗಿದ್ದೀಯಾ? ಹಲ್ಲು ಮುಂದೆ, ಕೂದಲು ಕಮ್ಮಿ ಹೀಗೆ ನಿಮ್ಮ ದೇಹದ ಬಗ್ಗೆ ಮಾತನಾಡೋದು.
- ನೀವು ಯಾವುದರಲ್ಲಿ ಗೆದ್ದರೂ ಅದನ್ನು ಒಪ್ಪದೇ ಇರೋದು
- ನಿಮ್ಮ ಆಸಕ್ತಿ ಬಗ್ಗೆ ಕೇರ್ ಮಾಡದೇ ಇರೋದು, ನೀವು ಹೇಳಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದು ಇರೋದು.
- ನೀವು ಒಬ್ಬ ವ್ಯಕ್ತಿ ಎನ್ನುವ ಕನಿಷ್ಠ ಗೌರವವರೂ ಸಿಗದೇ ಇರೋದು.
- ನಿಮ್ಮ ಎನರ್ಜಿ ಒಂದೇ ಸಲಕ್ಕೆ ಕುಗ್ಗಿ ಹೋಗುವಂತ ಚುಚ್ಚು ಮಾತುಗಳನ್ನು ಆಡೋದು.
ಬೆದರಿಕೆ ಹಾಕೋದು - ನೀವು ಎಲ್ಲಿಗೆ ಹೋಗ್ತಿದ್ದೀರಿ, ಏನು ಮಾಡ್ತೀರಿ ಸದಾ ಕಣ್ಣಿಡೋದು.
- ನಿಮ್ಮ ಪಾಸ್ವರ್ಡ್ಗಳನ್ನು ಪಡೆಯೋದು, ನಿಮ್ಮ ಫೋನ್ ಚೆಕ್ ಮಾಡೋದು.
- ನಿಮ್ಮ ಜೀವನದ ಕಹಿ ಘಟನೆಯನ್ನು ಪದೆ ಪದೆ ನೆನಪಿಸಿ ಹಿಂಸೆ ನೀಡೋದು
- ಎಲ್ಲ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳೋದು, ನೀವು ಲೆಕ್ಕಕ್ಕೇ ಇಲ್ಲ ಎನ್ನುವಂತೆ ಮಾಡೋದು.
ಈ ಎಲ್ಲ ಮಾಹಿತಿಯನ್ನು ಇಂಟರ್ನೆಟ್ ಆಧರಿಸಿ ಬರೆಯಲಾಗಿದೆ, ತೊಂದರೆಗಳು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ